ಕಾಪು ಹರೀಶ್ ನಾಯಕ್ ಗೆ ಬೆಳ್ಳಿಯ ಶಂಖ ನೀಡಿ ಗೌರವಿಸಿ ಸನ್ಮಾನಿಸಿದ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ: vishwanews24

Featured, ಉಡುಪಿ

ಕಾಪು ಹರೀಶ್ ನಾಯಕ್ ಗೆ ಬೆಳ್ಳಿಯ ಶಂಖ ನೀಡಿ ಗೌರವಿಸಿ ಸನ್ಮಾನಿಸಿದ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ: vishwanews24

ಕಾಪು: ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ
– ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಸಹಭಾಗಿತ್ವ: ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ,ವಿದ್ಯಾರ್ಥಿವೇತನ ವಿತರಣೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ಉಚ್ಚಿಲ ಮಾಧವಮಂಗಳ‌‌ ಸಭಾಂಗಣದಲ್ಲಿ ನಡೆಯಿತು.


ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡು ಜವಬ್ದಾರಿಯುತ ಹಾಗೂ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ ಕಾಪು ಹರೀಶ್ ನಾಯಕ್ ಅವರನ್ನು ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ವತಿಯಿಂದ ಭಾರತ ಸರ್ಕಾರದ ನ್ಯಾಷನಲ್ ಬ್ಯಾಂಕ್ ಆಫ್ ಇನ್ಫ್ರಸ್ಟ್ರಕ್ಷರ್ ಡೆವಲಪ್‌ಮೆಂಟ್ ಇದರ
ಚೇರ್ ಮೇನ್ ಪದ್ಮಭೂಷಣ ಶ್ರೀ ಕೆ ವಿ ಕಾಮತ್ ಶಾಲು ಹೊದಿಸಿ ಬೆಳ್ಳಿಯ ಶಂಖ ನೀಡಿ ಗೌರವಿಸಿ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಸಿಎ ಎಸ್ ಎಸ್ ನಾಯಕ್ ಮಾತನಾಡಿ” ಇಡೀ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ‌ ಪ್ರಮುಖ ಪಾತ್ರ ವಹಿಸಿದ ಹರೀಶ್ ನಾಯಕ್ ಅವರ ಅವಿರತ ಶ್ರಮ ಇದೆ ಎಂದರು.


ಈ‌ ಸಂಧರ್ಭದಲ್ಲಿ ಎಮ್ ವಿ‌ ಕಿಣಿ,ವಿವೇಕಾನಂದ ಶೆಣೈ, ಶಕುಂತಲಾ ಭಂಡಾರ್ಕರ್, ರಘುನಂದನ‌ ಎಸ್ ಕಾಮತ್, ಪ್ರಸಾದ್ ಶೆಣೈ, ಉಪ್ಪುಂದ ರಾಮಚಂದ್ರ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

Leave a Reply