ಕಾಪು ಹಳೇ ಮಾರಿಯಮ್ಮ ದೇವಸ್ಥಾನ ದೇವಿಯ ಸಿಂಹವಾಹನಕ್ಕೆ ಸ್ವರ್ಣಮುಖ – Vishwanews24

Featured, ಉಡುಪಿ

ಕಾಪು ಹಳೇ ಮಾರಿಯಮ್ಮ ದೇವಸ್ಥಾನ ದೇವಿಯ ಸಿಂಹವಾಹನಕ್ಕೆ ಸ್ವರ್ಣಮುಖ

ಕಾಪು: ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಮುಂಬಯಿಯ ಭಜಕರಾದ ಸುನೀತಾ ಎಸ್. ಕಾಮತ್ ದೇಣಿಗೆಯೊಂದಿಗೆ
ಮತ್ತು ಇತರ ಭಕ್ತರ ಕಾಲಾವಧಿ ಸುಗ್ಗಿ ಮಾರಿಪೂಜೆಯಂದು ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಶ್ರೀ ದೇವಿಯ ಸಿಂಹವಾಹನಕ್ಕೆ ಸ್ವರ್ಣ ಮುಖ ಸಮರ್ಪಣೆಗೊಳ್ಳಲಿದೆ.

ಮಾ. 21ರಂದು ಸಂಜೆ 6.30ಕ್ಕೆ ಸ್ವರ್ಣ ಮುಖ ಸಿಂಹವಾಹನದ ಪುರಪ್ರವೇಶ ಶೋಭಾ ಯಾತ್ರೆ ನಡೆಯಲಿದ್ದು, ಕಾಪು ವೀರಭದ್ರ
ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡು ಶ್ರೀ ಕೊಂಕಣಿ ಮಠ ವೆಂಕಟರಮಣ ದೇವಸ್ಥಾನದವರೆಗೆ ಮೆರವಣಿಗೆ ಸಾಗಲಿದೆ. ಬಳಿಕ ಸುಗ್ಗಿ ಮಾರಿ
ಪೂಜೆ ಪ್ರಯುಕ್ತ ಶ್ರೀ ವೆಂಕಟರಮಣ ದೇವಸ್ಥಾನದಿಂದ ಹಳೇ ಮಾರಿಯಮ್ಮ ದೇವಸ್ಥಾನದ ವರೆಗೆ ದೇವಿಯ ರಜತ ರಥೋತ್ಸವ ನಡೆಯಲಿದೆ.

No photo description available.

ಶೋಭಾಯಾತ್ರೆಯಲ್ಲಿ ಶಿರಸಿಯ ಐತಿಹಾಸಿಕ ಬೇಡರ ವೇಷ ತಂಡ, ಚಿತ್ರಕಲಾ ಆರ್ಟ್ಸ್ ತಂಡದ ಸಿಂಹ ನಡಿಗೆ, ಕೇರಳ ಶೈಲಿಯ ಚೆಂಡೆ, ಕೊಂಬು, ವಾದ್ಯ ತಂಡಗಳ ಸಹಿತ ವಿವಿಧ ಟ್ಯಾಬ್ ಮತ್ತು ಆಕರ್ಷಕ ನೃತ್ಯ ತಂಡಗಳು ಪಾಲ್ಗೊಳ್ಳಲಿವೆ ಎಂದು ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತಸರ
ಪ್ರಸಾದ್ ಗೋಕುಲ್‌ದಾಸ್ ಶೆಣೈ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಪು ಪೇಟೆಯ ಹತ್ತು ಸಮಸ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply