ಕಾಪುವಿಗೆ ಕಾಲಿಟ್ಟ ಹಿಜಾಬ್ ವಿವಾದ- ಫಕಿರಣಕಟ್ಟೆ ಉರ್ದು ಶಾಲೆಯ ವಠಾರ ಬೂದಿಮುಚ್ಚಿದ ಕೆಂಡದ ಪರಿಸ್ಥಿತಿ.vishwanews24
ಕಾಪುವಿಗೆ ಕಾಲಿಟ್ಟ ಹಿಜಾಬ್ ವಿವಾದ- ಫಕಿರಣಕಟ್ಟೆ ಉರ್ದು ಶಾಲೆಯ ವಠಾರ ಬೂದಿಮುಚ್ಚಿದ ಕೆಂಡದ ಪರಿಸ್ಥಿತಿ.
ಕಾಪು: ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ಕಾಪುವಿನ ಮೆಲ್ಲನೆ ದಾಪುಗಾಲಿಟ್ಟು ಸದ್ಯ ಮಲ್ಲಾರು ಗ್ರಾಮದ ಫಕಿರಣಕಟ್ಟೆಯ ಸರಕಾರಿ ಸಂಯುಕ್ತ ಉರ್ದು ಪ್ರೌಢ ಶಾಲೆಯಲ್ಲಿ ಹಿಜಾಬ್ ವಿವಾದ ಆರಂಭವಾಗಿದೆ.
ಸರ್ಕಾರಿ ಆದೇಶದ ಪ್ರಕಾರ ಶಾಲಾ ಕಾಳೆಜಿಗಳಿಗೆ ಯಾವುದೇ ಧಾರ್ಮಿಕ ಉಡುಪು ಧರಿಸಬಾರದೆಂಬ ನಿಯಮದನ್ವಯ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿಗೆ ಪ್ರವೇಶ ಕೊಡದೆ ಸ್ಟಾಫ್ ರೂಂ ನಲ್ಲಿ ಕೂರಿಸಿರುವ ಬಗ್ಗೆ ಪೋಷಕರು ಅಸಮಧಾನ ಗೊಂಡು ಶಾಲೆಯ ಮುಂಭಾಗ ಜಮಾವಣೆಗೊಂಡಿದ್ದಾರೆ.


