ಕಾಪುವಿಗೆ ಬಂದಿಳಿದ ರವಿಶಂಕರ ಗುರೂಜಿ: ಶಂಕರಪುರ ಮಲ್ಲಿಗೆ ಹಾರ ಹಾಕಿ ಸ್ವಾಗತ – vishwanews24

Featured, ಉಡುಪಿ

ಕಾಪುವಿಗೆ ಬಂದಿಳಿದ ರವಿಶಂಕರ ಗುರೂಜಿ: ಶಂಕರಪುರ ಮಲ್ಲಿಗೆ ಹಾರ ಹಾಕಿ ಸ್ವಾಗತ.. 

ಮಂಗಳವಾರ ಸಂಜೆ ಭಕ್ತಿ ಭಾವದ ಆನಂದ ಲಹರಿ ಕಾರ್ಯಕ್ರಮ 

ಕಾಪು : ಫೆ. 20 ರಂದು ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ ಜ್ಞಾನ, ಧ್ಯಾನ ಹಾಗೂ ಗಾಯನಗಳನ್ನೊಳಗೊಂಡಿರುವ ಆನಂದ ಲಹರಿ – ಸುಮಧುರ ಸಂಜೆ ಕಾರ್ಯಕ್ರಮದ ಅಂಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ, ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಆರ್ಟ್ ಆಫ್ ಲೀವಿಂಗ್‌ನ ಸಂಸ್ಥಾಪಕ, ಪದ್ಮವಿಭೂಷಣ ಗುರುದೇವ್ ಶ್ರೀ ರವಿಶಂಕರ್ ಗುರೂಜಿ ಸೋಮವಾರ ರಾತ್ರಿ ಕಾಪುವಿನ ಮಂಥನ್ ರೆಸಾರ್ಟ್ ಗೆ ಬಂದಿಳಿದಿದ್ದಾರೆ.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹೋದರರು ಗುರೂಜಿಗೆ ಶಂಕರಪುರದ ಮಲ್ಲಿಗೆ ಹಾರವನ್ನು ಹಾಕಿ ಸ್ವಾಗತಿಸಿಕೊಂಡರು.
ಸೋಮವಾರ ರಾತ್ರಿ ಇಲ್ಲಿಯೆ ವಿಶ್ರಾಂತಿ ಪಡೆದು ಮಂಗಳವಾರ ಬೆಳಿಗ್ಗೆ ಭಕ್ತರನ್ನು ಭೇಟಿ ಮಾಡಿ ನಂತರ ಹೊಸ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರದ ಕಾಮಗಾರಿಯನ್ನ ವೀಕ್ಷಣೆ ಮಾಡಲಿದ್ದಾರೆ.

Leave a Reply