ಕಾಪುವಿನ ಶೀನಾ ದೇವಾಡಿಗ ಇನ್ನಿಲ್ಲ : ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಸಂತಾಪ
ಕಾಪುವಿನ ಶೀನಾ ದೇವಾಡಿಗ ಇನ್ನಿಲ್ಲ : ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಸಂತಾಪ
ಕಾಪು: ಇಲ್ಲಿನ ಚಿರಪರಿಚಿತ ವ್ಯಕ್ತಿತ್ವದ ಸದಾ ಹಸನ್ಮುಖಿಯಾಗಿದ್ದ ಶೀನಾ ದೇವಾಡಿಗ ಕಾಪು ಅವರು ಇಂದು ಹೃದಯಾಘಾತದಿಂದ ನಿಧನರಾದರು.
ಉಡುಪಿ ಜಿಲ್ಲಾ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಯೊಗೀಶ್ ಶೆಟ್ಟಿಯ ಆಪ್ತಕಾರ್ಯದರ್ಶಿಯಾಗಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು ಮತ್ತು ಕಾಪುವಿನ ಮಹಾಬಲ ಮಾಲ್ ಇದರ ಮೇಲುಸ್ತುವಾರಿಯಾಗಿಯ ಕಾರ್ಯ ನಿರ್ವಹಿಸುತ್ತಿದ್ದರು.
ಮುಂಬಯಿಂದ ವಾಪಸ್ಸಾಗುತ್ತಿದ್ದ ಸಮಯದಲ್ಲಿ ಬಸ್ಸಿನಲ್ಲಿಯೇ ಈ ದುರ್ಘಟನೆ ನಡೆದಿದೆ.
ಶೀನಾ ದೇವಾಡಿಗರ ನಿಧನಕ್ಕೆ ಮಾಲ್ ನ ಅಂಗಡಿ ಮಾಲಕರು ಸೇರಿದಂತೆ ಯೋಗಿಶ್ ಶೆಟ್ಟಿ ಕಂಬನಿ ಮಿಡಿದಿದ್ದಾರೆ.
