ಕಾಪುವಿನಲ್ಲಿ ವಶಕ್ಕೆ ಪಡೆದ ಎಲ್ಲಾ ಗೋವುಗಳು ಗೋಶಾಲೆಗೆ ಸಾಗಿಸುವ ಗೋವುಗಳು: ಜಯಪ್ರಕಾಶ್ ಪ್ರಭು

Featured, ಉಡುಪಿ

ಕಾಪುವಿನಲ್ಲಿ ವಶಕ್ಕೆ ಪಡೆದ ಎಲ್ಲಾ ಗೋವುಗಳು ಗೋಶಾಲೆಗೆ ಸಾಗಿಸುವ ಗೋವುಗಳು: ಜಯಪ್ರಕಾಶ್ ಪ್ರಭು

ಕಾಪು: ಇಂದು ಬೆಳ್ಳಗೆ ಕೆಲ ಹೊತ್ತು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದ್ದ ಸುಮಾರು ಮೂರು ಲಾರಿಗಳಲ್ಲಿ ಸಾಗಿಸುತ್ತಿದ್ದ ಗೋವುಗಳನ್ನು ಕಾಪು ಪೋಲಿಸರು ವಶಕ್ಕೆ ಪಡೆದ ವಿಚಾರಕ್ಕೆ ಕಡೆಗೂ ತೆರೆ ಬಿದ್ದಂತಾಗಿದೆ.

ಈ ಗೋವುಗಳನ್ನ ಕೇರಳದ ವಯನಾಡಿನಿಂದ ಧರ್ಮ ಫೌಂಡೆಶನ್ ಸಂಸ್ಥೆಯ ವತಿಯಿಂದ ಉಡುಪಿ‌ ಜಿಲ್ಲೆಯ ಬಂಟಕಲ್ಲು ಅರಸಿಕಟ್ಟೆಯಲ್ಲಿರುವ ಗೋಶಾಲೆಯಲ್ಲಿ ಸಾಕುವ ಉದ್ದೇಶದಿಂದ ಕೊಂಡಯ್ಯಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಗೋಶಾಲೆಗೆ ಭೇಟಿ ನೀಡಿ‌ ಮತ್ತು ದಾಖಲೆ ಪರೀಶಿಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಯಾವುದೇ ಕಸಾಯಿಖಾನೆಗೆ ಸಾಗುವ ಗೋವುಗಳು ಅಲ್ಲ ಎಂಬ ದಿಟವಾಗಿದೆ.

ಈ‌ ಬಗ್ಗೆ ವಿಶ್ವ ಹಿಂದೂ ಪರಿಷತ್ ನ ಪ್ರಖಂಡ ಸಂಚಾಲಕ ಜಯಪ್ರಕಾಶ್ ಪ್ರಭುರ ಹೇಳಿಕೆಯ ಪ್ರಕಾರ ಎಲ್ಲಾ ಗೋವುಗಳು ಸುರಕ್ಷಿತವಾಗಿದೆ ಮತ್ತು ಅಸ್ವಸ್ಥತಗೊಂಡ ಗೋವುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಮತ್ತು ಸದುದ್ದೇಶದಿಂದ ಮತ್ತು ಸಾಕುವ ಉದ್ದೇಶದಿಂದ ಗೋವುಗಳನ್ನು ತರಲಾಗಿತ್ತು ಎಂದರು.

ಧರ್ಮ ಫೌಂಡೇಶನ್ ನ ಅಧ್ಯಕ್ಷರಾಗಿ ಪಂದಳ ರಾಜಕಾರ್ಯನಿರ್ವಹಿಸುತ್ತಿದ್ದು ,ಉಡುಪಿಯ ಜಿಲ್ಲಾ ಅಧ್ಯಕ್ಷರಾಗಿ ಗಿರೀಶ್ ಜಿ ಕಾರ್ಯನಿರ್ವಹಿಸುತ್ತಿದ್ದಾರೆ.