ಕಾಪುವಿನಲ್ಲಿ ಸೊರಕೆಗೆ ಟಾಂಗ್ ನೀಡಲಿದ್ದಾರ ಬಿಲ್ಲವರು..? ಮತ್ತೋರ್ವ ಬಿಲ್ಲವ ಯುವ ಮುಖಂಡ ಪಕ್ಷೇತರನಾಗಿ ಕಣಕ್ಕೆ.

Featured, ಉಡುಪಿ

ಕಾಪು :ಹೌದು ಕರ್ನಾಟಕ ವಿಧಾನಸಭಾ ಕ್ಷೇತ್ರ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದಂತೆ ಕಾಪುವಿನಲ್ಲಿ ಹೊಸ ಬಾಂಬ್ ಸಿಡಿದಿದೆ.ಕಳೆದ ಚುನಾವಣೆಯಲ್ಲಿ ವಿನಯ್ ಕುಮಾರ್ ಸೊರಕೆಯನ್ನ ಗೆಲ್ಲಿಸಲು ಶತಾಯ-ಗತಾಯ ಪ್ರಯತ್ನ ಮಾಡಿ ಯಶಸ್ಸು ಗಳಿಸಿದ್ದ ನವೀನ್ ಅಮೀನ್ ಶಂಕರಪುರ ಮತ್ತು ತಂಡ ಈ ಭಾರಿ ವಿನಯ್ ಕುಮಾರ್ ಸೊರಕೆಗೆ ಶಾಕ್ ನೀಡಲು ಹೊರಟಿದ್ದಾರೆ.ಬಿಲ್ಲವ ನಾಯಕನಾಗಿ ಹೊರಹೊಮ್ಮಿದ ಅಮೀನ್ ಕಳೆದ ಚುನಾವಣೆಯಲ್ಲಿ ಪಕ್ಷೇತರನಾಗಿ ನಿಲ್ಲುವ ಯೋಜನೆ ಹಾಕಿದ್ದರೂ ಕೊನೆ ಕ್ಷಣದಲ್ಲಿ ಸೊರಕೆ ಬೆಂಬಲಿಸುವ ಸಲುವಾಗಿ ನಿರ್ಧಾರ ಕೈ ಬಿಡಲಾಗಿತ್ತು. ಆದರೇ ಈ ಸಲ ಮಾತ್ರ ಸೊರಕೆಯೆದುರಿಗೆ ಕಣಕ್ಕಿಳಿದಿರುವುದು ಹೊಸ ಸಂಚಲನವನ್ನು ಉಂಟುಮಾಡಿದೆ.
ಮಾಜಿ ತಾಲೂಕು ಪಂಚಾಯತ್ ಸದಸ್ಯರಾಗಿ ರಾಜಕೀಯ ಅನುಭವ ಪಡೆದಿರುವ ಅಮೀನ್ ಈ ಭಾರಿ ಕಾಪುವಿನಲ್ಲಿ ತನ್ನದೇ ಆದ ಹೊಸ ಯುವಕರ ತಂಡವೊಂದನ್ನ ಕಟ್ಟಿಕೊಂಡು ಪಕ್ಷೇತರನಾಗಿ ಕಣಕ್ಕಿಳಿದಿದ್ದಾರೆ.ಮಾತ್ರವಲ್ಲದೆ ಏಪ್ರೀಲ್ 18 ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ತನ್ನ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಂದ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಇವರ ಈ ಬಾರಿಯ ಸ್ಪಧರ್É ಕಾಪು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಉಂಟುಮಾಡಿದೆ.
ಸೌಹಾರ್ದ ನಾಯಕನಾಗಿ ಹೊರಹೊಮ್ಮಿದ ಅಮೀನ್ ಬಿಲ್ಲವ ಸಮಾಜದ ಯುವ ನಾಯಕನೆಂದೇ ಹೆಸರು ಪಡೆದಿದ್ದು ಸಮಾಜದ ಹಲವಾರು ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವವರು.

ಸೊರಕೆಗೆ ಕೈ ಕೊಡಲಿದ್ದಾರ ಬಿಲ್ಲವರು..?
ಹೌದು ನವೀನ್ ಅಮೀನ್ ಪಕ್ಷೇತರನಾಗಿ ಕಣಕ್ಕಿಳಿದಿರುವುದರಿಂದ ಸೊರಕೆಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಬಹುದು. ಕಳೆದ ಚುನಾವಣೆಯಲ್ಲಿ ಮೂಲತಹ ಪುತ್ತೂರಿನ ವಿನಯ್ ಕುಮಾರ್ ಸೊರಕೆಯನ್ನ ಬಿಲ್ಲವ ನಮ್ಮ ನಾಯಕನೆಂದು ಮನೆಮನೆಗೆ ಕರೆಸಿ ಪ್ರಚಾರ ನೀಡಿಸಿದ್ದ ಮತ್ತು ಗೆಲ್ಲಲು ಸಹಕರಿಸಿದ್ದ ಅಮೀನ್ ಮತ್ತು ತಂಡ ಈ ಸಲ ಸೊರಕೆಗೆ ಕೈ ಕೊಡಬಹುದಾಗಿದೆ. ಆದರೇ ಈ ಸಲ ಅದೇ ಬಳಗ ಅಮೀನ್ ಪರ ಹೆಚ್ಚು ಪ್ರಚಾರ ನೀಡಿ ಅವರನ್ನ ಬೆಂಬಲಿಸುವುದರಲ್ಲಿ ಅನುಮಾನವಿಲ್ಲ.

ಹಳ್ಳಿಯಿಂದ ದಿಲ್ಲಿಯವರೆಗೆ ಅಲರ್ಟ್ ಆದ ನವೀನ್ ಅಮೀನ್ ಬ್ರಿಗೇಡ್

ಹೌದು ಕಾಪು ಕ್ಷೇತ್ರದಲ್ಲಿ ನವೀನ್ ಅಮೀನ್ ಪಕ್ಷೇತರನಾಗಿ ಚುನಾವಣೆಗೆ ನಿಲ್ಲುವುದೆಂದು ಕಳೆದ ಎಲೆಕ್ಷನ್‍ನಲ್ಲಿ ನಿರ್ಧಾರವಾಗಿದ್ದರೂ ಕಡೆ ಕ್ಷಣದಲ್ಲಿ ಅದು ನೆಲಕಚ್ಚಿಹೋಗಿತ್ತು. ಆದರೆ ಅಮೀನ್ ಸಂಘಟನೆ ಮಾತ್ರ ತನ್ನ ಕಾರ್ಯ ಚಟುವಟಿಕೆಯನ್ನ ನಿಲ್ಲಿಸದೇ ಸಂಘಟನೆಯನ್ನ ಗಟ್ಟಿಗೊಳಿಸುವ ಕಾರ್ಯದಲ್ಲಿಯೇ ಮಗ್ನವಾಗಿದ್ದವು.

ಪ್ರತಿಯೊಂದು ಗ್ರಾಮದಲ್ಲಿ ಕನಿಷ್ಟ ಹತ್ತು ಮಂದಿಯನ್ನ ಸಂಘಟನೆಗೆ ಸೇರಿಸುವ ಕಾರ್ಯ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಕೇವಲ ಊರು ಮಾತ್ರವಲ್ಲದೇ ಹೊರರಾಜ್ಯದಲ್ಲಿ ದುಡಿಯುತ್ತಿರುವ ನಮ್ಮೂರಿನ ಯುವಕರನ್ನ ಮುಟ್ಟುವ ಪ್ರಯತ್ನ ಮತ್ತು ಸಂಘಟನೆಗೆ ಸೇರಿಸುವ ಕಾರ್ಯದಲ್ಲಿ ಯಶಸ್ಸು ಕಂಡಿದ್ದೇವೆ.ಮತ್ತು ಮುಂದೆ ನಡೆಯುವ ಎಲೆಕ್ಷನ್‍ಗೆ ಅವರೆಲ್ಲರೂ ನಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂದು ಸಂಘಟಕರೊಬ್ಬರಲ್ಲಿ ಮಾತು ಕೇಳಿ ಬಂದಿದೆ.


ಸೌಹಾರ್ದ ಸಂಘಟನೆಗಳಲ್ಲಿಯೂ ಸಕ್ರೀಯ ಅಮೀನ್

ಶಂಕರಪುರ ಮಾತ್ರವಲ್ಲದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಸೌಹಾರ್ದ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಮತ್ತು ಸಂಘಟನೆಗಳಲ್ಲಿ ನವೀನ್ ಅಮೀನ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ.ಶಂಕರಪುರದ ಸೈಂಟ್ ಜೋನ್ಸ್ ಚರ್ಚ್‍ನ ಸೌಹಾರ್ದ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊಡುಗೈದಾನಿ ಅಮೀನ್
ಒರ್ವ ಉದ್ಯಮಿಯಾಗಿ ಬೆಳೆದಿರುವ ಅಮೀನ್ ಬಡವರ ಅಶಕ್ತರ ಪಾಲಿಗೆ ಕಣ್ಮಣಿಯಾಗಿದ್ದಾರೆ. ಬಡಹೆಣ್ಣು ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳಿಗೆ ತನ್ನದೇ ಆದ ರೀತಿಯ ಸಹಕಾರ ಮಾಡುತ್ತ ಬಂದಿರುವುದು ಮಾತ್ರವಲ್ಲದೆ ಶೈಕ್ಷಣಿಕ ಉದ್ದೇಶಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದಾರೆ.

“ಯುವಕರು ರಾಜಕೀಯಕ್ಕೆ ಇಳಿಯುವುದರಲ್ಲಿ ತಪ್ಪೇನಿಲ್ಲ ಮತ್ತು ನನಗೆ ರಾಜಕೀಯ ಹೊಸ ಅನುಭವವಂತಲ್ಲ.ಕಳೆದ ಚುನವಣೆಯಲ್ಲಿಯೇ ಪಕ್ಷೇತರನಾಗಿ ಚುನಾವಣೆ ಎದುರಿಸುವ ಧೈರ್ಯವಿತ್ತು ಆದರೇ ಕಡೇ ಕ್ಷಣದಲ್ಲಿ ಹಿರಿಯರ ಮಾತಿಗೆ ಬೆಲೆ ನೀಡಿ ನಾನು ಮತ್ತು ನನ್ನ ಸಂಘಟನೆ ಸೊರಕೆಯನ್ನ ಬೆಂಬಲಿಸಬೇಕಾಯಿತು.ಆದರೆ ಸೊರಕೆ ಆಡಿದ ಮಾತಿನಂತೆ ಕೆಲಸ ಮಾಡಿಲ್ಲ ಜನರ ನಿರೀಕ್ಷೆಯನ್ನ ಹುಸಿಮಾಡಿದ್ದಾರೆ. ಹಾಗಾಗಿ ಈ ಸಲ ನನ್ನ ಸಂಘಟನೆಯ ಕಾರ್ಯಕರ್ತರೊಂದಿಗೆ ಮತ್ತು ಸೌಹಾರ್ಧ ಸಮಾಜದ ನಾಯಕರೊಂದಿಗೆ ಚರ್ಚಿಸಿ ಚುನಾವಣೆಗೆ ನಿಲ್ಲುವ ನಿರ್ಧಾರಕ್ಕೆ ಬಂದಿದ್ದೇನೆ.”
ನವೀನ್ ಅಮೀನ್ ಶಂಕರಪುರ
ಪಕ್ಷೇತರ ಅಭ್ಯರ್ಥಿ, ಕಾಪು ವಿಧಾನ ಸಭಾ ಕ್ಷೇತ್ರ

\