ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 400 ಮಂದಿ ಸಾವು ; 250ಕ್ಕೂ ಹೆಚ್ಚು ಮಂದಿ ಗಾಯ – vishwanews24
ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 400 ಮಂದಿ ಸಾವು ; 250ಕ್ಕೂ ಹೆಚ್ಚು ಮಂದಿ ಗಾಯ
ಕಾಬೂಲ್ : ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಗಡಿ ಸಂಘರ್ಷವು ಭೀಕರ ಯುದ್ಧಕ್ಕೆ ತಿರುಗಿದ್ದು, ಸೋಮವಾರ ರಾತ್ರಿ ಪಾಕಿಸ್ತಾನದ ಯುದ್ಧ ವಿಮಾನಗಳು ಕಾಬೂಲ್ನ ಪ್ರಮುಖ ಆಸ್ಪತ್ರೆಯ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 400 ಮಂದಿ ಮೃತಪಟ್ಟಿದ್ದಾರೆ.
ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಕಾಬೂಲ್ನಲ್ಲಿರುವ 2,000 ಹಾಸಿಗೆ ಸಾಮರ್ಥ್ಯದ ‘ಡ್ರಗ್ ಸೆಂಟರ್’ ಆಸ್ಪತ್ರೆಯ ಮೇಲೆ ಪಾಕಿಸ್ತಾನದ ವಾಯುಪಡೆ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ಆಸ್ಪತ್ರೆಯ ಪ್ರಮುಖ ವಿಭಾಗಗಳು ನೆಲಸಮವಾಗಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಸರ್ಕಾರದ ವಕ್ತಾರ ಹಮ್ದಲ್ಲಾ ಫಿತ್ರಾತ್ ತಿಳಿಸಿದ್ದಾರೆ. ಮೃತರಲ್ಲಿ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:
ದಿನಕ್ಕೆ ಕನಿಷ್ಟ 5 ಸಾವಿರ LPG ಸಿಲಿಂಡರ್ಗಳನ್ನಾದರೂ ಪೂರೈಕೆ ಮಾಡಿ: ಹೋಟೆಲ್ ಮಾಲಕರ ಸಂಘ ಆಗ್ರಹ – vishwanews24
“ಪಾಕಿಸ್ತಾನವು ನಾಗರಿಕ ಪ್ರದೇಶಗಳನ್ನು ಗುರಿ ಮಾಡುತ್ತಿದ್ದು, ಇದು ಮಾನವೀಯತೆಯ ವಿರುದ್ಧದ ಅಪರಾಧ” ಎಂದು ಅಫ್ಘಾನಿಸ್ತಾನ ಕಿಡಿ ಕಾರಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಪಾಕ್ ಪ್ರಧಾನಿ ಶೆಹ್ಬಾಜ್ ಶರೀಫ್, “ನಾವು ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಲ್ಲ” ಎಂದಿದ್ದಾರೆ. ಪಾಕ್ ಮಾಹಿತಿ ಸಚಿವ ಅತ್ತೌಲ್ಲಾ ತರರ್ ಪ್ರತಿಕ್ರಿಯಿಸಿ, “ನಾವು ಕೇವಲ ಭಯೋತ್ಪಾದಕ ಅಡ್ಡೆಗಳು ಹಾಗೂ ಶಸ್ತ್ರಾಸ್ತ್ರ ಸಂಗ್ರಹಣಾ ತಾಣಗಳ ಮೇಲೆ ದಾಳಿ ಮಾಡಿದ್ದೇವೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ನಡುವೆ, ಭಯೋತ್ಪಾದನೆಯನ್ನು ಹತ್ತಿಕ್ಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (UNSC) ತಾಲಿಬಾನ್ ಆಡಳಿತಕ್ಕೆ ಸೂಚಿಸಿದೆ. ಪಾಕಿಸ್ತಾನಿ ತಾಲಿಬಾನ್ ಮತ್ತು ಬಲೂಚ್ ಉಗ್ರರಿಗೆ ಅಫ್ಘಾನ್ ಆಶ್ರಯ ನೀಡುತ್ತಿದೆ ಎಂಬ ಪಾಕ್ ಆರೋಪದ ನಡುವೆಯೇ ಈ ಭೀಕರ ದಾಳಿ ನಡೆದಿದೆ.
ಇದನ್ನೂ ಓದಿ:
ವಿಧಾನಸಭೆಯಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ವಿಫಲ: ಅಧಿಕಾರಿಗಳ ವಿರುದ್ಧ CM ಗರಂ – vishwanews24
