ಕಾರವಾರ : ಭಟ್ಕಳದಲ್ಲಿ ಶಂಕಿತ ಉಗ್ರನಿಗಾಗಿ ಮಹಾರಾಷ್ಟ್ರ ಎಟಿಎಸ್ ತಂಡದಿಂದ ಶೋಧ – vishwanews24

Featured, ರಾಜ್ಯ ನ್ಯೂಸ್

ಭಟ್ಕಳದಲ್ಲಿ ಶಂಕಿತ ಉಗ್ರನಿಗಾಗಿ ಮಹಾರಾಷ್ಟ್ರ ಎಟಿಎಸ್ ತಂಡದಿಂದ ಶೋಧ

ಕಾರವಾರ: ಪುಣೆಯಲ್ಲಿ ನಡೆದ ಉಗ್ರ ಕೃತ್ಯದ ಆರೋಪಿಗಾಗಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ವು ಭಟ್ಕಳದಲ್ಲಿ ಶೋಧ ನಡೆಸಿದೆ.

ಭಟ್ಕಳದ ನವಾಯತ್ ಕಾಲೋನಿಯ ಹಾಜಿ ಮಂಜಿಲ್ ನಿವಾಸಿ ಅಬ್ದುಲ್ ಕಬೀರ್ ಸುಲ್ತಾನ್ ಅಲಿಯಾಸ್ ಮೌಲಾನ ಸುಲ್ತಾನ್ ಎಂಬಾತನಿಗಾಗಿ ಎಟಿಎಸ್ ಹುಡುಕಾಟ ನಡೆಸಲಾಗಿದೆ. ಈತ ಪುಣೆಯಲ್ಲಿ ನಡೆದ ಉಗ್ರ ಕೃತ್ಯದ ಆರೋಪಿಯಾಗಿದ್ದು, ಕಳೆದೊಂದು ವರ್ಷದಿಂದ ತಲೆಮರೆಸಿಕೊಂಡಿದ್ದಾನೆ.

ದರ್ಶನ್ ಪ್ರಕರಣ : ಅಧಿಕಾರಿಗಳು ಬಿಟ್ರೆ ಯಾರೂ ಇದರಲ್ಲಿ ಮಧ್ಯಪ್ರವೇಶ ಮಾಡಿಲ್ಲ, ಅದರ ಅವಶ್ಯಕತೆ ಯಾರಿಗೂ ಇಲ್ಲ: ಪರಮೇಶ್ವರ್ ಸ್ಪಷ್ಟನೆ – vishwanews24

ಶಂಕಿತ ಉಗ್ರ ಕಬೀರ್ ಸುಲ್ತಾನ್ ನನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ಮಹಾರಾಷ್ಟ್ರ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆ ಎಟಿಎಸ್ ತಂಡ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದೆ. ಭಟ್ಕಳದಲ್ಲಿನ ಶಂಕಿತ ಉಗ್ರ ಕಬೀರ್ ಸುಲ್ತಾನ್ ನಿವಾಸಕ್ಕೆ ಎಟಿಎಸ್ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ. ಎಟಿಎಸ್ ಅಧಿಕಾರಿಗಳು ಆರೋಪಿಯ ಬಂಧನಕ್ಕೆ ಉತ್ತರ ಕನ್ನಡ ಪೊಲೀಸರ ಸಹಕಾರ ಕೋರಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ : ಅಧಿಕಾರಿಗಳ ಜತೆ ಎಂ.ಬಿ. ಪಾಟೀಲ್‌ ಚರ್ಚೆ – vishwanews24

Leave a Reply