ಕಾರ್ಕಳ: MRPL ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕನಿಗೆ 1 ಲಕ್ಷ ರೂ.ವಂಚನೆ – vishwanews24

Featured, ಉಡುಪಿ

ಕಾರ್ಕಳ: MRPL ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕನಿಗೆ 1 ಲಕ್ಷ ರೂ.ವಂಚನೆ

ಕಾರ್ಕಳ: ಮುಲ್ಕಡ್ಕ ಗ್ರಾಮದ ಯುವಕ ಸುಚಿತ್‌ಗೆ ಎಂಆರ್‌ಪಿಎಲ್ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಘಟನೆ ವರದಿಯಾಗಿದೆ.

ಉದ್ಯೋಗ ಹುಡುಕುತ್ತಿದ್ದ ಸುಚಿತ್‌ಗೆ ಆರೋಪಿ ಮಂಗಳೂರಿನ ಅವಿನಾಶ್ ಎಂಬಾತ ಎಂಆರ್‌ಪಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದ್ದಾನೆ. 1.05 ಲಕ್ಷ ರೂ. ಹಣಕೊಟ್ಟರೆ ಕೆಲಸವಾಗುತ್ತದೆ ಎಂದು ತಿಳಿಸಿದ್ದು, ನ.18ರಿಂದ ಡಿ.26ರವರೆಗೆ ಹಂತ ಹಂತವಾಗಿ ಆರೋಪಿ 1.05 ಲಕ್ಷ ರೂ. ಹಣ ಪಡೆದು ಕೆಲಸವನ್ನು ಕೊಡಿಸದೇ, ಹಣವನ್ನು ವಾಪಸು ನೀಡದೆ ಮೋಸ ಮಾಡಿದ್ದಾನೆ ಎಂದು ದೂರಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಎಲ್ಲಾ ಮತಗಟ್ಟೆಗಳಲ್ಲಿ ಪ್ರಕಟ :  ಜಿಲ್ಲಾಧಿಕಾರಿ – vishwanews24

Leave a Reply