ಕಾರ್ಕಳ : ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಯ ಅಮಾನತು ಆದೇಶ ಹಿಂಪಡೆದ ಸರ್ಕಾರ – vishwanews24

Featured, ಉಡುಪಿ

ಕಾರ್ಕಳ : ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಯ ಅಮಾನತು ಆದೇಶ ಹಿಂಪಡೆದ ಸರ್ಕಾರ

ಕಾರ್ಕಳ: ಕುಕ್ಕುಂದೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪ್ರಭಾವತಿಯವರ ಅಮಾನತು ಆದೇಶವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿಂದಕ್ಕೆ ಪಡೆದಿದೆ‌. ಕುಕ್ಕುಂದೂರು ಗ್ರಾ.ಪಂ. ಅನುದಾನದಿಂದ ನಿರ್ಮಿಸಲಾಗಿರುವ ಹೆಚ್ಚುವರಿ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಸುನಿಲ್ ಕುಮಾರ್ ಅವರನ್ನು ಆಹ್ವಾನ ಮಾಡಲಿಲ್ಲ. ಇದರ ಬಗ್ಗೆ ಮಾಹಿತಿ ಕಲೆ ಹಾಕಿ ಸೆಪ್ಟೆಂಬರ್ 4ರಂದು ಇಲಾಖೆ ಅಮಾನತು ಮಾಡಿತ್ತು.

ಅಮಾನತು ಆದೇಶ ಬಳಿಕ ಪುನಃ ಈ ಬಗ್ಗೆ ಪರಿಶೀಲನೆ ಮಾಡಿದ ಬಳಿಕ ಇಂದು ಅವರನ್ನು ಮರಳಿ ಗೌರವ ಧನ ಸೇವೆಗೆ ತೆರಳಲು ಇಲಾಖೆ ಆದೇಶ ನೀಡಿದೆ.

ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯ ಅಮಾನತು ಆದೇಶ ಹಿಂಪಡೆದ ಇಲಾಖೆ -

ಕುಕ್ಕುಂದೂರು ಗ್ರಾ.ಪಂ. ಅನುದಾನದಿಂದ ನಿರ್ಮಿಸಲಾಗಿ ರುವ ಕೊಠಡಿಯ ಉದ್ಘಾಟನೆ ಅಂಗ ವಾಗಿ ಆ.28ರಂದು ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ವತಿಯಿಂದ ಏರ್ಪಡಿಸಿರುವ ಗಣ ಹೋಮ ಹಾಗೂ ಹೆಚ್ಚುವರಿ ಕೊಠಡಿ ಉದ್ಘಾಟನೆ ಮಾಹಿತಿಯನ್ನು ಇಲಾಖೆ ಅಥವಾ ಸ್ಥಳೀಯ ಶಾಸಕರ ಗಮನಕ್ಕೆ ತಂದಿರಲಿಲ್ಲ.

ಕಾಪು: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ತಡೆ – vishwanews24

ಕಾರ್ಯಕ್ರಮ ನಡೆದಿರುವ ಬಗ್ಗೆ ಸ್ಥಳೀಯರಿಂದ ಇಲಾಖೆಗೆ ತಿಳಿದು ಬಂದಿದ್ದು, ಇದು ಶಿಷ್ಟಾಚಾರ ಉಲ್ಲಂಘನೆ ಆಗಿರುತ್ತದೆ. ಇದಕ್ಕೆ ಸಂಬಂಧಿಸಿ ಜಯಂತಿನಗರ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಂಬಂಧಪಟ್ಟ ವಲಯ ಮೇಲ್ವಿಚಾರಕಿಗೆ ಕಾರಣ ಕೇಳಿ ಇಲಾಖೆಯಿಂದ ನೋಟೀಸು ನೀಡಲಾಗಿತ್ತು.

ಅಂಗನವಾಡಿ ಕಾರ್ಯಕರ್ತೆ ಮತ್ತು ವಲಯ ಮೇಲ್ವಿಚಾರಕಿ ನೋಟಿಸಿಗೆ ಸಮಜಾಯಿಷಿ ನೀಡಿದ್ದರು. ಸದರಿ ಅಂಗನವಾಡಿ ಕಾರ್ಯಕರ್ತೆಯ ಕರ್ತವ್ಯ ಲೋಪದ ಕುರಿತು ಕೈಗೊಳ್ಳಲು ಅಂಗನವಾಡಿ ಕಾರ್ಯ ಕರ್ತೆ, ಸಹಾಯಕಿಯರ ಆಯ್ಕೆ ಸಮಿತಿ ಅಧ್ಯಕ್ಷೆ ಜಿಲ್ಲಾಧಿಕಾರಿ ಯವರು ಉಲ್ಲೇಖ (6)ರನ್ವಯ ಜಯಂತಿ ನಗರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪ್ರಭಾವತಿ ಯವ ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದರು.

ಉಡುಪಿಯಲ್ಲಿ ಗೋವಾ ಲಿಕ್ಕರ್ ಸಮೇತ ಆರೋಪಿಯ ಬಂಧನ :vishwanews24

 

Leave a Reply