ಕಾರ್ಕಳ: ಅಪಾಯಕಾರಿ ಹೊಂಡ ತಪ್ಪಿಸಲು ಹೋದ ಕಾರಿಗೆ ಇನ್ನೊಂದು ಕಾರು ಡಿಕ್ಕಿ – ಎರಡೂ ಕಾರುಗಳು ಜಖಂ – Vishwanews24
ಕಾರ್ಕಳ: ಅಪಾಯಕಾರಿ ಹೊಂಡ ತಪ್ಪಿಸಲು ಹೋದ ಕಾರಿಗೆ ಇನ್ನೊಂದು ಕಾರು ಡಿಕ್ಕಿ – ಎರಡೂ ಕಾರುಗಳು ಜಖಂ
ಕಾರ್ಕಳ: ಅಪಾಯಕಾರಿ ಹೊಂಡ ತಪ್ಪಿಸಲು ಹೋದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಎರಡೂ ಕಾರುಗಳು ಜಖಂಗೊಂಡ ಘಟನೆ ಕಾರ್ಕಳ ತಾಲೂಕು ಕುಂಟಿಬೈಲು ತಿರುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.ಅಪಘಾತ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿದೆ.
ಬಜಗೋಳಿಯ ವೈದ್ಯರೊಬ್ಬರಿಗೆ ಸೇರಿದ ಕಾರು ಬಜಗೋಳಿಯಿಂದ ಕಾರ್ಕಳಕ್ಕೆ ಹೊರಟಿದ್ದು,ಕುಂಟಿಬೈಲು ತಿರುವಿನಲ್ಲಿರುವ ಅಪಾಯಕಾರಿಯಾದ ದೊಡ್ಡ ಹೊಂಡವನ್ನು ತಪ್ಪಿಸುವಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: ಎಚ್ಚರಿಕೆಯ ನಡೆ ಅಗತ್ಯ.. ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಕುಂಟಿಬೈಲಿನಲ್ಲಿರುವ ಈ ತಿರುವಿನಲ್ಲಿ ಅಪಾಯಕಾರಿ ಹೊಂಡವೊಂದಿದ್ದು ಇದೇ ಕಾರಣದಿಂದಾಗಿ ಇಲ್ಲಿ ಸರಣಿ ಅಪಘಾತಗಳಾಗುತ್ತಿದೆ.ಇತ್ತೀಚೆಗೆ ಮಣ್ಣು ತುಂಬಿಸಿ ಹೊಂಡಕ್ಕೆ ಟೇಪೀ ಹಾಕುವ ಕೆಲಸ ಮಾಡಿದ್ದರೂ ಮಳೆಯ ಕಾರಣದಿಂದ ಮಣ್ಣು ಕಿತ್ತು ಹೋಗಿತ್ತು.ಇದೀಗ ಬೃಹತ್ ಹೊಂಡಕ್ಕೆ ಮತ್ತೊಂದು ಅಪಘಾತವಾಗಿದೆ.
ಇದನ್ನೂ ಓದಿ: ಉಡುಪಿ : ಮಿಥುನ್ ರೈ ಒಬ್ಬ ಚಿಲ್ಲರೆ ಮನುಷ್ಯ ಅವನಿಗೆಲ್ಲಾ ನಾನು ಉತ್ತರ ಕೊಡುವುದಿಲ್ಲ: ಶೋಭಾ ಕರಂದ್ಲಾಜೆ – Vishwanews24
