ಕಾರ್ಕಳ : ಅವಧಿ ಮೀರಿದ ಆಹಾರ ತಿಂದು 5 ಹಸುಗಳು ಸಾವು, ಹಲವು ಅಸ್ವಸ್ಥ -Vishwanews24
ಕಾರ್ಕಳ : ಅವಧಿ ಮೀರಿದ ಆಹಾರ ತಿಂದು 5 ಹಸುಗಳು ಸಾವು, ಹಲವು ಅಸ್ವಸ್ಥ -Vishwanews24
ಕಾರ್ಕಳ: ಹೊಳೆಯ ಬದಿ ಎಸೆದ ಅವಧಿ ಮೀರಿದ ಆಹಾರವನ್ನು ತಿಂದ ಹಸುಗಳು ಮೃತಪಟ್ಟ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ಜೋಹಲ್ಬೆಟ್ಟು ನದಿಯ ಹತ್ತಿರ ಸುಮಾರು 25 ಗೋಣಿ ಕಡಲೆ ಹಿಟ್ಟನ್ನು ಯಾರೋ ಬಿಸಾಕಿ ಹೋಗಿದ್ದು . ಇದನ್ನು ತಿಂದ ಐದು ಹಸುಗಳು ಸಾವನ್ನಪ್ಪಿದ್ದು ಸುಮಾರು 25 ರಿಂದ 30 ಹಸುಗಳು ಅಸ್ವಸ್ಥಗೊಂಡಿವೆ.
ಈ ದುರುಳರ ಕೃತ್ಯಕ್ಕೆ ಮೂಕ ಪ್ರಾಣಿಗಳು ಬಲಿಯಾಗಿದ್ದು, ಘಟನೆಗೆ ಸಂಬಂಧಿಸಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು, ಹಿಂದೂ ಸಂಘಟನೆಯವರು ಆಗ್ರಹಿಸಿದ್ದಾರೆ.
