ಕಾರ್ಕಳ : ಅಸಹಾಯಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ತಾಯಿ ಹಾಗೂ ಐದು ಜನ ಮಕ್ಕಳಿಗೆ ಆಶ್ರಯ ಒದಗಿಸಿದ ಹೊಸ ಬೆಳಕು ಆಶ್ರಮ – Vishwanews24
ಕಾರ್ಕಳ : ಅಸಹಾಯಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ತಾಯಿ ಹಾಗೂ ಐದು ಜನ ಮಕ್ಕಳಿಗೆ ಆಶ್ರಯ ಒದಗಿಸಿದ ಹೊಸ ಬೆಳಕು ಆಶ್ರಮ
ಕಾರ್ಕಳ : ಅಸಹಾಯಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ತಾಯಿ ಹಾಗೂ ವಿದ್ಯಾಭ್ಯಾಸದಿಂದ ವಂಚಿತರಾಗಿದ್ದ ಐದು ಜನ ಮಕ್ಕಳನ್ನು ಕಾರ್ಕಳ ನಗರ ಪೊಲೀಸ್ ಠಾಣಾ ಸಿಬ್ಬಂದಿಗಳ ಸಹಕಾರದಿಂದ ರಕ್ಷಿಸಿರುವ ಘಟನೆ ಕಾರ್ಕಳ ತಾಲೂಕಿನ ನಕ್ರೆ ಗ್ರಾಮದ ಪೋಸನೊಟ್ಟು ಎಂಬಲ್ಲಿ ನಡೆದಿದೆ.
ಹೊಸ ಬೆಳಕು ಆಶ್ರಮದ ಸಂಚಾಲಕರಾದ ವಿನಯ ಚಂದ್ರ ಸಾಸ್ತಾನ ಹಾಗೂ ತನುಲಾ ತರುಣ್ ತಾಯಿ ಮಕ್ಕಳಿಗೆ ಮಕ್ಕಳಿಗೆ ಆಶ್ರಯವನ್ನು ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಮಂಗಳೂರಿನಲ್ಲಿ ಗಾಂಜಾ ದಂಧೆ ; ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿ 10 ಮಂದಿ ಬಂಧನ – Vishwanews24

ಕಾರ್ಯಚರಣೆಯಲ್ಲಿ ಅನುಷಾ ಆಚಾರ್ ಪಳ್ಳಿ ಹೊಸ ಬೆಳಕು ಆಶ್ರಮದ ಗೌರೀಶ್, ಕುಮಾರ್ ಜಾರ್ಕಳ ಹಾಗೂ ಕಾರ್ಕಳ ನಗರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಸುಭಾಷ್ ಕಾಮತ್ ಸಹಕರಿಸಿದರು ಸಂಸ್ಥೆಯ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತ ವಾಗಿದೆ.
ಉಡುಪಿ: ಮಿಲಾಗ್ರಿಸ್ ಟ್ರಾವೆಲ್ಸ್ ಮಾಲಕ ರೋಷನ್ ಡಿಸೋಜಾ ನಿಧನ – VIshwanews24
