ಕಾರ್ಕಳ:  ಆನ್‌ಲೈನ್ ವಂಚನೆ -7.63 ಲಕ್ಷ ರೂಪಾಯಿ ಕಳೆದುಕೊಂಡ ವ್ಯಕ್ತಿ – Vishwanews24

Featured, ಉಡುಪಿ

ಕಾರ್ಕಳ:  ಆನ್‌ಲೈನ್ ವಂಚನೆ -7.63 ಲಕ್ಷ ರೂಪಾಯಿ ಕಳೆದುಕೊಂಡ ವ್ಯಕ್ತಿ

ಕಾರ್ಕಳ: ವ್ಯಕ್ತಿಯೊಬ್ಬರು ಆನ್‌ಲೈನ್ ವಂಚನೆಯಿಂದ 7.63 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ವಂಚನೆಗೊಳಗಾದವರು ಕಾರ್ಕಳದ ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್‌ಗಳಲ್ಲಿ ಎಸ್‌ಬಿ ಖಾತೆಗಳನ್ನು ಹೊಂದಿದ್ದಾರೆ.

ಫೆಲಿಕ್ಸ್ ಡಯಸ್ ಎಂಬ ಫೇಸ್‌ಬುಕ್ ಖಾತೆದಾರನು ಫೆಬ್ರವರಿ 4ರಂದು ಕಾರ್ಕಳ ಮೂಲದ ವ್ಯಕ್ತಿಗೆ ಪರಿಚಯವಾಗಿದ್ದ. ಅವನು ಯುರೋಪ್‌ನ ಸೈಪ್ರಸ್‌ನಲ್ಲಿ ಇದ್ದಾನೆ ಎಂದು ನಂಬಿಸಿದ್ದ. ಅಲ್ಲದೆ, ವ್ಯಾಲೆಂಟೈನ್ ಡೇಗೆ ಉಡುಗೊರೆಯಾಗಿ ಸಂತ್ರಸ್ತರಿಗೆ ಪಾರ್ಸೆಲ್‌ಗಳನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದಾನೆ. ವಂಚಕನು ಫೆಬ್ರವರಿ 13ರಂದು ಸಂತ್ರಸ್ತೆಯ ವಾಟ್ಸ್ ಆ್ಯಪ್ ಸಂಖ್ಯೆಗೆ ಪಾರ್ಸೆಲ್‌ಗಳ ಫೋಟೋವನ್ನು ಕಳುಹಿಸಿದ್ದ.

ಮಂಗಳೂರು : ಜಾನುವಾರು ಸಾಗಾಟ ನಿಷೇಧದ ಆದೇಶ ವಾಪಾಸ್’ : ಡಿಸಿ ರವಿಕುಮಾರ್ – Vishwanews24

ಈ ನಡುವೆ, ದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿಯಂತೆ ಅಪರಿಚಿತ ವ್ಯಕ್ತಿ 9870189535 ಸಂಖ್ಯೆಯಿಂದ ದೂರವಾಣಿ ಕರೆ ಮಾಡಿ ಪಾರ್ಸೆಲ್ ಗ್ರೌಂಡ್ ಪಾಸ್‌ಗಾಗಿ ರೂ 47,000 ರೂ. ಪಾವತಿಸುವಂತೆ ಸೂಚಿಸಿದ್ದ. ಇದನ್ನು ನಂಬಿದ ವ್ಯಕ್ತಿ ವಂಚಕ ತಿಳಿಸಿದ ಖಾತೆಗೆ ಹಣ ವರ್ಗಾಯಿಸಿದ್ದರು. ಬಳಿಕ ವಂಚಕ ವಿವಿಧ ಕಾರಣಗಳನ್ನು ನೀಡಿ ಹಣ ಕಳುಹಿಸುವಂತೆ ಒತ್ತಡ ಹಾಕುತ್ತಿದ್ದ ಎಂದು ತಿಳಿದುಬಂದಿದೆ. ಹೀಗೆ ವಂಛಕನ ಒತ್ತಡಕ್ಕೆ ಮಣಿದು ಬರೋಬ್ಬರಿ 7.63 ಲಕ್ಷ ರೂ. ವರ್ಗಾಯಿಸಿದ ಬಳಿಕ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.

ಇದೀಗ ವಂಚನೆ ಪ್ರಕರಣದ ಕುರಿತಂತೆ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ.

ಮಂಗಳೂರು : ಜಾನುವಾರು ಸಾಗಾಟ ನಿಷೇಧದ ಆದೇಶ ವಾಪಾಸ್’ : ಡಿಸಿ ರವಿಕುಮಾರ್ – Vishwanews24

Leave a Reply