ಕಾರ್ಕಳ: ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಸಂಜೀವ ದೇವಾಡಿಗ – Vishwanews24
ಕಾರ್ಕಳ: ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಸಂಜೀವ ದೇವಾಡಿಗ
ಕಾರ್ಕಳ : ಕಳೆದ 29 ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕನಾಗಿ ಸೇವೆಗೈದ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರು ನಿವಾಸಿ ಸಂಜೀವ ದೇವಾಡಿಗ ಇವರಿಗೆ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಲಭಿಸಿದೆ.
1994ರಲ್ಲಿ ಸಾಣೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡಿದ್ದರು. ತದ ನಂತರ ಹೆರ್ಮುಂಡೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ವರ್ಷ ಸೇವೆಗೈದು ತಾಲೂಕು ಕ್ಷೇಮ ಸಂಪನ್ಮೂಲ ಕೇಂದ್ರದಲ್ಲಿ 8 ವರ್ಷ ಕಾಲ ಕರ್ತವ್ಯ ನಿರ್ವಹಿಸಿದ್ದರು.
ಕೆರ್ವಾಸೆ ಬಂಗ್ಲಗುಡ್ಡೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟು ವರ್ಷ ಕಾಲ ಸೇವೆಗೈದಿದ್ದ ಇವರು ಕಳೆದ ನಾಲ್ಕು ತಿಂಗಳ ಹಿಂದೆ ಮಿಯ್ಯಾರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಉಪಾಧ್ಯಾಯರಾಗಿ ಸೇವೆಗೈಯುತ್ತಿದ್ದಾರೆ.
ನೌಕಾಪಡೆಯ ನೂತನ ಲಾಂಛನ, ಧ್ವಜ ಅನಾವರಣ ಮಾಡಿದ ಪ್ರಧಾನಿ ಮೋದಿ – Vishwanews24
