ಕಾರ್ಕಳ: 1 ವರ್ಷದಲ್ಲಿ 16 ದನ ಕಳೆದುಕೊಂಡ ಯಶೋಧ  ಆಚಾರ್ಯಗೆ  ಕಾಂಗ್ರೆಸ್‌-ಬಿಜೆಪಿ ಹಾಗೂ ಬಜರಂಗದಳದಿಂದ ಗೋದಾನ – Vishwanews24

Featured, ಉಡುಪಿ

ಕಾರ್ಕಳ: 1 ವರ್ಷದಲ್ಲಿ 16 ದನ ಕಳೆದುಕೊಂಡ ಯಶೋಧ  ಆಚಾರ್ಯಗೆ  ಕಾಂಗ್ರೆಸ್‌-ಬಿಜೆಪಿ ಹಾಗೂ ಬಜರಂಗದಳದಿಂದ ಗೋದಾನ – Vishwanews24

ಕಾರ್ಕಳ: ಇಲ್ಲಿನ ಒಂದೇ ಮನೆಯ ಹದಿನಾರು ಗೋವನ್ನು ಕಳೆದುಕೊಂಡ ಯಶೋಧ ಆಚಾರ್ಯ ಅವರಿಗೆ ಸಚಿವ ಸುನೀಲ್‌ ಕುಮಾರ್‌, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ, ವಿಶ್ವಹಿಂದೂಪರಿಷತ್‌ ಬಜರಂಗದಳ ಗೋದಾನ ಮಾಡಿದರು.

ಮೊನ್ನೆ ಯಶೋಧ ಆಚಾರ್ಯ ಮನೆಗೆ ಭೇಟಿ ನೀಡಿ ಉಡುಪಿ ಜಿಲ್ಲಾ ಯುವ ಕಾಂಗ್ರೇಸ್ ಸಮಿತಿ ಹಾಗೂ ಕಾರ್ಕಳ ಯುವ ಕಾಂಗ್ರೆಸ್ ತಂಡ ಅವರನ್ನು ಸಂತೈಸಿದೆ.

ಅಲ್ಲದೆ ಈ ಕೂಡಲೆ ಸರಕಾರದಿಂದ 5 ಲಕ್ಷ ರೂ ಪರಿಹಾರವನ್ನು ದೊರಕಿಸಿಕೊಡುವಂತೆ ಸ್ಥಳೀಯ ಶಾಸಕ ಸಚಿವ ಸುನಿಲ್ ಕುಮಾರ್ ಅವರಲ್ಲಿ ಆಗ್ರಹಿಸಿದ್ದಾರೆ.

ಸಚಿವ ವಿ.ಸುನೀಲ್‌ಕುಮಾರ್ ಮಂಗಳವಾರದಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗೋವುಗಳನ್ನು ದಾನ ರೂಪದಲ್ಲಿ ನೀಡಿ, ಯಶೋಧಾ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು.

ಬೆಂಗಳೂರು: ಸದ್ಯದ ಮಟ್ಟಿಗೆ ಯಾವ ಶಾಲಾ ಕಾಲೇಜಿಗೆ ರಜೆ ಘೋಷಿಸಲ್ಲ, ಪರಿಸ್ಥಿತಿ ನೋಡಿ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿ : ಬಿ.ಸಿ ನಾಗೇಶ್ – Vishwanews24

ಈ ನಡುವೆ ವಿಶ್ವಹಿಂದುಪರಿಷತ್ ಮುಖಂಡ ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್, ಬಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್. ನೇತೃತ್ವದಲ್ಲಿ ಕಾರ್ಯಕರ್ತರು ಯಶೋಧಾ ಅವರ ಮನೆಗೆ ತೆರಳಿ ದನಗಳನ್ನು ದಾನಮಾಡಿ, ಆತ್ಮವಿಶ್ವಾಸ ಮೂಡಿಸಿದ್ದಾರೆ.

ಒಂದು ಗೋವನ್ನು ಉಡುಪಿ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್‌ ಕೋಟ್ಯಾನ್‌ ನೀಡಿದರು. ಈ ಸಂದರ್ಭದಲ್ಲಿ ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ನಯನ ಇನ್ನಾ, ಕಾಂಗ್ರೇಸ್ ಮುಖಂಡರಾದ ತಾರಾನಾಥ ಕೋಟ್ಯಾನ್, ಪ್ರದೀಪ್ ಬೇಲಾಡಿ ಮೊದಲಾದವರು ಉಪಸ್ಥಿತರಿದ್ದರು.

ಮೊಬೈಲ್‌ ಆ್ಯಪ್‌ ಲೋನ್ ಗಳ ಸಾಲದ ಮೋಹಕ್ಕೆ ಬೀಳಬೇಡಿ ; ಯುವಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ – Vishwanews24

Leave a Reply