ಕಾರ್ಕಳ ಕಾಂಗ್ರೇಸ್‍ನಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದ ಮುನಿಯಾಲು ಉದಯ್ ಶೆಟ್ಟಿ.

Featured, ಉಡುಪಿ

ಕಾರ್ಕಳ : ಕಾರ್ಕಳ  ರಾಜಕೀಯಕ್ಕೆ ಎಂಟ್ರಿ ಕೊಟ್ಟ ದಿನಗಳಿಂದಲೂ ಕ್ಷೇತ್ರದ ಜನರೊಂದಿಗೆ ಉತ್ತಮ ಭಾಂಧವ್ಯ ಇರಿಸಿಕೊಂಡು ಇದೀಗ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಯಾಗಿ ಮುನಿಯಾಲು ಉದಯ್  ಶೆಟ್ಟಿ ಪಕ್ಷದ ಕಾರ್ಯ ಕರ್ತರಲ್ಲಿ ಹೊಸ ವಿಸ್ವಾಸ ಮೂಡಿಸಿದ್ದಾರೆ.

ಒರ್ವ ಉದ್ಯಮಿಯಾಗಿ ಕೆಲಸಮಾಡಿ ಹೆಸರು ಮಾಡಿದ ಶೆಟ್ರು ಕಾಂಗ್ರೇಸ್ ಪಕ್ಷದಲ್ಲಿ ಸಕ್ರಿಯರಾಗಿ ಪಕ್ಷದ ಕಾರ್ಯಕರ್ತರು ಮತ್ತು ಜನರಲ್ಲಿ ಶಾಸಕರಾಗಲು ಸಮರ್ಥ ಎನ್ನುವ ವಿಶ್ವಾಸ ಮೂಡಿಸಲು ಹೆಣಗಿದ್ದಾರೆ. ಅವರ ಪ್ರಯತ್ನ ಇದೀಗ ಬಿಜೆಪಿ ಟಿಕೆಟ್ ಪಡೆಯುವುದರಲ್ಲಿ ಅವರಿಗೆ ಫಲ ಕೊಡುವ ನಿರೀಕ್ಷೆ ಇದೆ.

ಎಲ್ಲಾ ಸಮುದಾಯಗಳನ್ನು ಒಟ್ಟು ಸೇರಿಸಿಕೊಂಡು ಹೋಗಬಲ್ಲ ಏಕೈಕ ರಾಜಕಾರಣಿ ಕಾರ್ಕಳ ಕ್ಷೇತ್ರದಲ್ಲಿದ್ದರೆ ಅದು ಮುನಿಯಾಲು ಉದಯ್  ಶೆಟ್ಟಿ ಎಂಬಷ್ಟರಮಟ್ಟಿಗೆ ಬೆಳೆದಿರುವುದು ಅವರ ರಾಜಕೀಯ ಬೆಳವಣಿಗೆಗೆ ಹಾಕಿದ ಗಟ್ಟಿ .

ಮಾಜಿ ಶಾಸಕ ಗೋಪಾಲ ಭಂಡಾರಿ ಹಿಂದಿನ ಭಾರಿ ಸುನಿಲ್ ಕುಮಾರ್ ಎದುರು ಚುನಾವಣೆ ಸೋತ ನಂತರ ಮತ್ತೆ ಅವರನ್ನು ಕಾಂಗ್ರೇಸ್ ಕಣಕ್ಕಿಳಿಸುವುದು ಸಂಶಯಾಸ್ಪದ ಎನ್ನುವ ಸುದ್ದಿ ಕ್ಷೇತ್ರದಾತ್ಯಂತ ಹಬ್ಬಿದೆ.ಯುವ ಸಮುದಾಯ ಹೊಸ ಮುಖ ಮುನಿಯಾಲ್ ಉದಯ್ ಶೆಟ್ಟಿಯವರನ್ನೆ ಅಭ್ಯರ್ಥಿ ಮಾಡಬೇಕು ಎನ್ನುವ ಆಶಯ ವ್ಯಕ್ತಪಡಿಸಿದೆ ಎಂದು ಮುನಿಯಾಲ್ ಉದಯ್  ಶೆಟ್ಟಿ ನಿಕಟವರ್ತಿಗಳು ಹೇಳುತ್ತಾರೆ.

ಪಕ್ಷ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಕ್ರಿಯರಾಗಿರುವ ಉದಯ್  ಶೆಟ್ಟಿ ಯಾವತ್ತೂ ಪಕ್ಷಕ್ಕೆ ಆಸ್ತಿಯಾಗಬಲ್ಲರು ಎನ್ನುವ ಮಾತು ಕಾರ್ಯಕರ್ತರಲ್ಲಿ ಕೇಳಿಬಂದಿದೆ.