ಕಾರ್ಕಳ : ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಯುವತಿ ನಾಪತ್ತೆ – vishwanews24

Featured, ಉಡುಪಿ

ಕಾರ್ಕಳ : ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಯುವತಿ ನಾಪತ್ತೆ

ಕಾರ್ಕಳ : ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿಕೊಂಡು ಹೋಗಿದ್ದ ಕಾರ್ಕಳ ನಂದಳಿಕೆಯ ಯುವತಿ ಕಾಣೆಯಾಗಿದ್ದಾಳೆ.

ನಂದಳಿಕೆ ಗ್ರಾಮದ ಮಾವಿನಕಟ್ಟೆಯ ದೀಪಾ (21) ಕಾಣೆಯಾಗಿರುವ ಕಾಲೇಜ್ ವಿದ್ಯಾರ್ಥಿನಿಯಾಗಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೀಪಾ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಎ. ವಿದ್ಯಾಭ್ಯಾಸ ಮಾಡುತ್ತಿದ್ದು, ನ. 6 ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದಾಳೆ, ಆದ್ರೆ ಕಾಲೇಜಿಗೂ ಹೋಗದೆ ಅತ್ತ ವಾಪಾಸು ಮನೆಗೂ ಬಾರದೇ ಜೊತೆಗೆ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಈ ಬಗ್ಗೆ ದೀಪಾಳ ಅಣ್ಣ ದಿಲೀಪ್‌ ಪೂಜಾರಿ ನೀಡಿದ ಮಾಹಿತಿಯಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply