ಕಾರ್ಕಳ : ಕೆರ್ವಾಶೆ ಗ್ರಾ. ಪಂ.ಉಪಚುನಾವಣೆ  -ಬಿಜೆಪಿಯ ಧರ್ಮರಾಜ ಹೆಗ್ಡೆ ಗೆಲುವು  – vishwanews24

Featured, ಉಡುಪಿ

ಕಾರ್ಕಳ : ಕೆರ್ವಾಶೆ ಗ್ರಾ. ಪಂ.ಉಪಚುನಾವಣೆ  -ಬಿಜೆಪಿಯ ಧರ್ಮರಾಜ ಹೆಗ್ಡೆ ಗೆಲುವು 

ಕಾರ್ಕಳ : ಕಾರ್ಕಳ ತಾಲೂಕಿನ 6 ಗ್ರಾ.ಪಂ.ನಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ನ.23ರಂದು ಉಪಚುನಾವಣೆ ನಡೆದಿದೆ. ನ. 26ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು ಕೆರ್ವಾಶೆ ಗ್ರಾ. ಪಂ.ನಲ್ಲಿ ಬಿಜೆಪಿಯ ಧರ್ಮರಾಜ ಹೆಗ್ಡೆ ಗೆಲುವು ಪಡೆದಿದ್ದಾರೆ.

ಕಾರ್ಕಳ : ನೀರೆ ಗ್ರಾ. ಪಂ. ಉಪಚುನಾವಣೆ :  ಪಕ್ಷೇತರ ಅಭ್ಯರ್ಥಿಗಳ ಗೆಲುವು – vishwanews24

 

ಇಲ್ಲಿ (ಸಾಮಾನ್ಯ ಮೀಸಲಾತಿ) 1 ಸದಸ್ಯ ಸ್ಥಾನ ಖಾಲಿಯಿದ್ದು, ಬಿಜೆಪಿಯಿಂದ ಧರ್ಮರಾಜ ಹೆಗ್ಡೆ ಹಾಗೂ ಕಾಂಗ್ರೆಸ್‌ನಿಂದ ನಾರಾಯಣ ನಾಯಕ್ ಸ್ಪರ್ಧಿಸಿದ್ದರು. 377 ಪುರುಷರು, 383 ಮಹಿಳೆಯರು ಸೇರಿದಂತೆ ಒಟ್ಟು 760 ಮತದಾರರಿದ್ದು, 78.1579ಶೇ. ಮತದಾನವಾಗಿತ್ತು. ಧರ್ಮರಾಜ ಹೆಗ್ಡೆ 367 ಮತ ಹಾಗೂ ನಾರಾಯಣ ನಾಯಕ್ 213 ಮತ ಪಡೆದಿದ್ದಾರೆ.

Leave a Reply