ಕಾರ್ಕಳ: ಗೋಕಳ್ಳತನ ನಡೆಸುವವರು, ಸಹಕರಿಸುವವರನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ : ಪೊಲೀಸರಿಗೆ ಸಚಿವ ಸುನಿಲ್‌ ಕುಮಾರ್‌ – Vishwanews24

Featured, ಉಡುಪಿ

ಕಾರ್ಕಳ: ಗೋಕಳ್ಳತನ ನಡೆಸುವವರು, ಸಹಕರಿಸುವವರನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ : ಪೊಲೀಸರಿಗೆ ಸಚಿವ ಸುನಿಲ್‌ ಕುಮಾರ್‌ – Vishwanews24

ಕಾರ್ಕಳ, (Vishwanews24): ಜಿಲ್ಲೆಯಲ್ಲಿ ಗೋಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಈ ಕೃತ್ಯ ನಡೆಸುವವರು, ಸಹಕರಿಸುವವರನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಅವರು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾತ್ರಿ ಪೊಲೀಸ್‌ ಗಸ್ತು ಹೆಚ್ಚಿಸಬೇಕು, ಚೆಕ್‌ಪೋಸ್ಟ್‌ ಗಳಲ್ಲಿ ನಿಗಾ ಇರಿಸಬೇಕು. ಈ ಹಿಂದೆ ಗೋಕಳ್ಳತನದಲ್ಲಿ ಭಾಗಿಯಾದವರನ್ನು ಠಾಣೆಗೆ ಕರೆಸಿ ತನಿಖೆ ನಡೆಸುವುದು, ಶಂಕಿತ ವ್ಯಕ್ತಿಗಳನ್ನು ತೀವ್ರ ತನಿಖೆಗೆ ಒಳಪಡಿಸಬೇಕು ಎಂದು ಸೂಚಿಸಿದರು.

ಇನ್ಮುಂದೆ ಜಿಲ್ಲೆಯಲ್ಲಿ ಗೋಕಳ್ಳತದಂತಹ ಕೃತ್ಯ ಗಳು ನಡೆಯದಂತೆ ನಿಗಾವಹಿಸಬೇಕು. 15 ದಿನಗಳಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಹತೋಟಿಗೆ ತರಬೇಕು ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ :

ಬೆಂಗಳೂರು: ಯಾವ ಮಕ್ಕಳಿಗೂ ಶಾಲೆಗೆ ಬರಲು ಬಲವಂತ ಇಲ್ಲ , ಹಾಜರಾತಿ ಕಡ್ಡಾಯ ಇಲ್ಲ : ಬಿ.ಸಿ. ನಾಗೇಶ್ – Vishwanews24

Leave a Reply