ಕಾರ್ಕಳ: ತಾಲೂಕಿನಾದ್ಯಂತ ಗಾಳಿ ಮಳೆಗೆ ಮನೆಗಳಿಗೆ ಹಾನಿ – Vishwanews24

Featured, ಉಡುಪಿ

ಕಾರ್ಕಳ: ತಾಲೂಕಿನಾದ್ಯಂತ ಗಾಳಿ ಮಳೆಗೆ ಮನೆಗಳಿಗೆ ಹಾನಿ – Vishwanews24

ಕಾರ್ಕಳ, : ಕಾರ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದ್ದು, ನಿಟ್ಟೆ ಗ್ರಾಮದ ಬೋರ್ಗಲ್ ಗುಡ್ಡೆ ಬಾಳೆ ಹಿತ್ತಲು ಎಂಬಲ್ಲಿನ ನಿವಾಸಿ ಗಣಪತಿ ನಾಯಕ್ ಎಂಬವರ ವಾಸ್ತವ್ಯದ ಮನೆ ಹಾನಿಯಾಗಿದೆ.

ಅಂದಾಜು 30 ಸಾವಿರದಷ್ಟು ನಷ್ಟ ಉಂಟಾಗಿದ್ದು, ಶುಕ್ರವಾರ ಹಗಲು ರಾತ್ರಿ ಸಾಧಾರಣ ಮಳೆಯಾಗಿದೆ.

ಶುಕ್ರವಾರ ರಾತ್ರಿ ಕಡ್ತಲ ಶೆಟ್ಟಿ ಬೆಟ್ಟು ನಿವಾಸಿ, ದೀಪಾ ನಾಯಕ್ ರವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಅಂದಾಜು ನಷ್ಟ ರೂ 7ಸಾವಿರದಷ್ಟು ನಷ್ಟವಾಗಿದೆ.

ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.