ಕಾರ್ಕಳ: ನಲ್ಲೂರು ಗ್ರಾ. ಪಂ. ಉಪಚುನಾವಣೆ – ಕಾಂಗ್ರೆಸ್ ಅಭ್ಯರ್ಥಿ ಸವಿತಾ ಶ್ರೀಧರ್ ಗೆಲುವು – vishwanews24

Featured, ಉಡುಪಿ

ಕಾರ್ಕಳ: ನಲ್ಲೂರು ಗ್ರಾಮ ಪಂಚಾಯತಿ – ಕಾಂಗ್ರೆಸ್ ಅಭ್ಯರ್ಥಿ ಸವಿತಾ ಶ್ರೀಧರ್ ಗೆಲುವು

ಕಾರ್ಕಳ: ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮ ಪಂಚಾಯತಿಯ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸವಿತಾ ಶ್ರೀಧರ್ ಗೆಲುವು ಪಡೆದಿದ್ದಾರೆ.

ನಲ್ಲೂರು ಗ್ರಾಮ ಪಂಚಾಯತಿಯ (ಅ.ಜಾ ಮತ್ತು ಮಹಿಳಾ ಮೀಸಲಾತಿ) 1 ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸವಿತಾ ಶ್ರೀಧರ್ ಹಾಗೂ ಬಿಜೆಪಿಯಿಂದ ಸುಮತಿ ಸ್ಪರ್ಧಿಸಿದ್ದರು. ಇಲ್ಲಿ 440 ಪುರುಷರು, 454 ಮಹಿಳೆಯರು ಸೇರಿದಂತೆ ಒಟ್ಟು 894 ಮತದಾರರಿದ್ದು, 65.8837 ಶೇ. ಮತದಾನವಾಗಿತ್ತು. ಸವಿತಾ 321 ಮತ ಹಾಗೂ ಸುಮತಿ 256 ಮತ ಪಡೆದಿದ್ದು, 65 ಮತಗಳ ಅಂತರದಲ್ಲಿ ಸವಿತಾ ಶ್ರೀಧರ್ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಕಾರ್ಕಳ : ಕಡ್ತಲ ಗ್ರಾ. ಪಂ.ಉಪಚುನಾವಣೆ  – ಕಾಂಗ್ರೆಸ್ ಅಭ್ಯರ್ಥಿ ದೀಕ್ಷಿತ್‌ ಶೆಟ್ಟಿ ಜಯಭೇರಿ – vishwanews24

Leave a Reply