ಕಾರ್ಕಳ ಪೊಲೀಸ್ ವಸತಿ ಗೃಹದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ -Vishwanews24
ಕಾರ್ಕಳ ಪೊಲೀಸ್ ವಸತಿ ಗೃಹದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ -Vishwanews24
ಕಾರ್ಕಳ : ಉಡುಪಿ ಜಿಲ್ಲಾ ಪೊಲೀಸ್, ಕಾರ್ಕಳ ಪೊಲೀಸ್ ವಸತಿ ಗೃಹದ ನೂತನ ಕಟ್ಟಡದ ಉದ್ಘಾಟನೆಯನ್ನು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ನೆರವೇರಿಸಿದರು.
ಕಾರ್ಕಳ ಪೊಲೀಸ್ ಠಾಣೆ ಪಕ್ಕದಲ್ಲೆ ಪೊಲೀಸರ ಅನುಕೂಲಕ್ಕೆ ಈ ವಸತಿ ಗೃಹ ನಿರ್ಮಾಣವಾಗಿದ್ದು, 2018ರಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ವತಿಯಿಂದ 92.20 ಕೋ.ರೂ ಮೊತ್ತದಲ್ಲಿ ಸಮುಚ್ಚಯ ನಿರ್ಮಾಣಗೊಂಡಿದೆ. ಎರಡು ಅಂತಸ್ತಿನ 4 ಬ್ಲಾಕ್ಗಳಲ್ಲಿ 48 ಕುಟುಂಬಗಳು ನೆಲೆಸಬಹುದು. ಕಾರ್ಕಳ ನಗರ, ಗ್ರಾಮಾಂತರ, ಅಜೆಕಾರ್ ಠಾಣೆಯ ವ್ಯಾಪ್ತಿಯ ಪೊಲೀಸರಿಗೆ ಇದು ಉಪಯುಕ್ತವಾಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್, ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಹಾಗೂ ಇತರರು ಉಪಸ್ಥಿತರಿದ್ದರು.
