ಕಾರ್ಕಳ: ಬಸ್ಸಿನಲ್ಲಿ ಯುವತಿಯರೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದಆರೋಪ – ಬಸ್‌ ಕಂಡಕ್ಟರ್‌ಗೆ ತಂಡದಿಂದ ಹಲ್ಲೆ -Vishwanews24

Featured, ಉಡುಪಿ

ಕಾರ್ಕಳ: ಬಸ್ಸಿನಲ್ಲಿ ಯುವತಿಯರೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದಆರೋಪ ; ಬಸ್‌ ಕಂಡಕ್ಟರ್‌ಗೆ ತಂಡದಿಂದ ಹಲ್ಲೆ -Vishwanews24

ಉಡುಪಿ: ಯುವತಿಯರೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದ ಆರೋಪದಲ್ಲಿ ಕಲ್ಯಾ ಗ್ರಾಮದ ಕುಂಟಾಡಿ ಅಶೋಕ ನಗರದ ಎಂಬಲ್ಲಿ ಚಲಿಸುತ್ತಿದ್ದ ಬಸ್ಸನ್ನು ತಡೆದು ನಿಲ್ಲಿಸಿದ ಆರೋಪಿತರು ನಿರ್ವಾಹಕನಿಗೆ ಹಲ್ಲೆ ನಡೆಸಿದ್ದಾರೆ. ಕೋಟ ಸಮೀಪದ ವಡ್ಡರ್ಸೆ ಎಮ್.ಜಿ. ಕಾಲೋನಿಯ ಶಮೀರ್ ಪರಾಶ್ (20) ಎಂತಾದ ಹಲ್ಲೆಗೊಳಗಾದ ಬಸ್ ನಿರ್ವಾಹಕ.

ಕೆಎ-20-ಎಎ-1674 ನೇ ನಂಬ್ರದ ಕೃಷ್ಣ ಪ್ರಸಾದ್ ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿದ್ದು, ಜನವರಿ 15ದಂದು ಬೆಳಿಗ್ಗೆ 9.30ಕ್ಕೆ ಮೂಡುಬೆಳ್ಳೆ-ಫ್ಫಿ-ಕಲ್ಯಾ ಮಾರ್ಗವಾಗಿ ಬಸ್ಸು ಹಾದು ಬರುತ್ತಿದ್ದ ಸಂದರ್ಭದಲ್ಲಿ ಆರೋಪಿತರಾದ ಅಶೋಕ, ಸಂತೋಷ ಎಂಬವರು ಇತರ ಇಬ್ಬರೊಂದಿಗೆ ಸೇರಿ ಬಸ್ಸನ್ನು ತಡೆದು ನಿಲ್ಲಿಸಿ ನಿವಾಹಕ ಶಮೀರ್ ಪರಾಶ್‌ನನ್ನು ಬಸ್ಸಿನಿಂದ ಹೊರಗೆ ಎಳೆದು ಹುಡುಗಿಯರೊಂದಿಗೆ ಅಸಭ್ಯ ರೀತಿಯಲ್ಲಿ ಮಾತನಾಡುತಯ್ತೀಯಾ ಎಂದು ಬೈದು ತಲೆ ಹಾಗೂ ಕೆನ್ನೆ ಭಾಗಕ್ಕೆ ಹೊಡೆದು ಗಾಯಗೊಳಿಸಿದ್ದಾರೆ.

ಈ ಬಗ್ಗೆ ಶಮೀರ್ ಪರಾಶ್ ಅವರು ದೂರು ನೀಡಿದ್ದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

http://ಉಡುಪಿ: ಪಡುಕೆರೆ ಬೀಚನ್ನು ಮರೀನಾ ಬೀಚಾಗಿ ಮಾಡುವ ಪ್ರಸ್ತಾವನೆಯನ್ನು ವಿರೋಧಿಸಿ ಸರ್ವ ಸಂಘಗಳ ಒಕ್ಕೂಟದಿಂದ ಪ್ರತಿಭಟನಾ ಸಭೆ -Vishwanews24