ಕಾರ್ಕಳ: ಬಹುಮಹಡಿ ಕಟ್ಟಡವೇರಿ ಸಾಹಸ ಪ್ರದರ್ಶಿಸಿದ ಜ್ಯೋತಿರಾಜ್ – Vishwanews24
ಕಾರ್ಕಳ: ಬಹುಮಹಡಿ ಕಟ್ಟಡವೇರಿ ಸಾಹಸ ಪ್ರದರ್ಶಿಸಿದ ಜ್ಯೋತಿರಾಜ್
ಕಾರ್ಕಳ: ಭಾರತದ ಮಂಕಿಮ್ಯಾನ್ ಎಂಬ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಕಾರ್ಕಳದ ಸಾಲ್ಮರ ಬಳಿಯಿರುವ ಬಹುಮಹಡಿ ಕಟ್ಟಡವೇರುವ ಸಾಹಸವನ್ನು ಬುಧವಾರ ಬೆಳಗ್ಗೆ ಪ್ರದರ್ಶಿಸಿದ್ದರು.
125 ಅಡಿ ಎತ್ತರದ ಕಟ್ಟಡವನ್ನು ಕೇವಲ 10 ನಿಮಿಷಗಳಲ್ಲಿ ಸರಸರನೇ ಹತ್ತಿಳಿದಾಗ ಅಲ್ಲಿದ್ದವರು ನಿಟ್ಟುಸಿರು ಬಿಟ್ಟರು. ಇದನ್ನು ನೋಡಲು 500ಕ್ಕೂ ಅಧಿಕ ಕುತೂಹಲಿಗಳು ನೆರೆದಿದ್ದರು. ಪೊಲೀಸರು ಭದ್ರತೆ ವ್ಯವಸ್ಥೆ ಮಾಡಿ, ವಾಹನಗಳನ್ನು ಏಕಮುಖ ರಸ್ತೆಯಾಗಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಟ್ಟಡದ ತುತ್ತತುದಿಯಲ್ಲಿ ಕನ್ನಡ ನಾಡಿನ ಬಾವುಟ ಹಾರಿಸುವ ಮೂಲಕ ಕನ್ನಡಾಭಿಮಾನವನ್ನು ಅವರು ಮೆರೆದರು.
‘ಅಡಿಕೆ’ ಬೆಳೆಗಾರರಿಗೆ ಗುಡ್ ನ್ಯೂಸ್ : ಆಮದು ದರ 100 ರೂ.ಹೆಚ್ಚಿಸಿದ ಕೇಂದ್ರ ಸರ್ಕಾರ – Vishwanews24
ರಾಜ್ಯದೆಲ್ಲೆಡೆ ಸುತ್ತಾಟ ಆರಂಭಿಸಿದ್ದೇನೆ. ಜೋಗ ಜಲಪಾತ ಏರುವಾಗ ಬಿದ್ದು ಗಾಯಗೊಂಡಿದ್ದೆ. ಎರಡು ವರ್ಷಗಳ ಬಳಿಕ ಮತ್ತೆ ಸಾಹಸ ವೃತ್ತಿಗೆ ಮರಳಿದ್ದೇನೆ. ಮೊದಲ ಪ್ರಯತ್ನವಾಗಿ ಬೆಳ್ತಂಗಡಿಯ ಗಡಾಯಿಕಲ್ಲು ಹತ್ತಿಳಿದ ಬಳಿಕ ಕಾರ್ಕಳದ ಸಮೃದ್ಧಿ ಕಟ್ಟಡ ಏರಿದ್ದೇನೆ.
ಅನುಮತಿಗಾಗಿ ಸಚಿವ ವಿ. ಸುನಿಲ್ ಕುಮಾರ್ ಹಾಗೂ ಉದ್ಯಮಿ ಶ್ರೀನಿವಾಸ್ ಕಾಮತ್ ಮತ್ತಿತರರು ನೆರವು ನೀಡಿದ್ದಾರೆ. ಬಾಲಾಜಿ ಹೊಟೇಲ್ನವರು ಉತ್ತಮ ಆತಿಥ್ಯ ನೀಡಿದರು. ಸಾಹಸ ಪ್ರದರ್ಶಿಸಿ ದೊರಕುವ ಹಣವನ್ನು ಫೌಂಡೇಶನ್ ಸ್ಥಾಪಿಸಿ ಬಡ ಮಕ್ಕಳ ನೆರವಿಗೆ ವಿನಿಯೋಗಿಸುವುದಾಗಿ ತಿಳಿಸಿದರು.
ಉದ್ಯಮಿ ನಿತ್ಯಾನಂದ ಪೈ ಜ್ಯೋತಿರಾಜ್ ಅವರನ್ನು ಅಭಿನಂದಿಸಿದರು. ಉದ್ಯಮಿ ಬೋಳ ಶ್ರೀನಿವಾಸ್ ಕಾಮತ್, ಸತೀಶ್ ಹೆಗ್ಡೆ ಬೈಲೂರು, ಅವಿನಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
