ಕಾರ್ಕಳ: ರಾಜ್ಯದ ಹಿಂದು ಪರ ಸಂಘಟನಾ ಕಾರ್ಯಕರ್ತರು ಕಾರ್ಕಳಕ್ಕೆ ಮುತ್ತಿಗೆ ಹಾಕುವ ಪರಿಸ್ಥಿತಿ ಎದುರು ಹಾಕದಿರಿ : ಸರ್ಕಾರಕ್ಕೆ ಶ್ರೀರಾಮಸೇನೆ ಎಚ್ಚರಿಕೆ – Vishwanews24

Featured, ಉಡುಪಿ

ಕಾರ್ಕಳ: ರಾಜ್ಯದ ಹಿಂದು ಕಾರ್ಯಕರ್ತರು ಕಾರ್ಕಳಕ್ಕೆ ಮುತ್ತಿಗೆ ಹಾಕುವ ಪರಿಸ್ಥಿತಿ ಎದುರು ಹಾಕದಿರಿ 

ಶ್ರೀರಾಮಸೇನಾ ಕಾರ್ಯಕರ್ತರ ತಂಟೆಗೆ ಬಂದರೆ ತಕ್ಕಶಾಸ್ತಿ-ಸರ್ಕಾರಕ್ಕೆ ಗಂಗಾಧರ್ ಕುಲಕರ್ಣಿ ಎಚ್ಚರಿಕೆ

ಕಾರ್ಕಳ: ಶ್ರೀರಾಮಸೇನಾ ಕಾರ್ಯಕರ್ತರ ವಿರುದ್ಧ ವಿನಾಕಾರಣ ಉಪಟಳ ನೀಡಿ ಕಾನೂನು ಕುಣಿಕೆಗೆ ಸಿಲುಕಿಸುವ ಪ್ರಯತ್ನಗಳು ಮುಂದುವರಿಸಿದ್ದಲ್ಲಿ ತಕ್ಕಶಾಸ್ತಿಯನ್ನು ಎದುರಿಸಬೇಕಾದೀತು. ಇಡೀ ರಾಜ್ಯದ ಹಿಂದು ಪರ ಸಂಘಟನಾ ಕಾರ್ಯಕರ್ತರು ಕಾರ್ಕಳಕ್ಕೆ ಮುತ್ತಿಗೆ ಹಾಕುವ ಪರಿಸ್ಥಿತಿ ಎದುರು ಹಾಕದಿರಿ ಎಂದು ಬಿಜೆಪಿ ರಾಜ್ಯ ಘಟಕ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರಕ್ಕೆ ಶ್ರೀ ರಾಮಸೇನೆಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಎಚ್ಚರಿಸಿದ್ದಾರೆ.

ಕಾರ್ಕಳ ವಿಸ್ತೃತ ಬಸ್ ನಿಲ್ದಾಣ ಪರಿಸರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2004ರ ವಿಧಾನ ಸಭಾ ಚುನಾವಣೆಯಲ್ಲಿ ಇದೇ ಕಾರಣದಿಂದ ಹಿಂದುತ್ವ ಸಂಘಟನೆಯ ಪ್ರಮುಖರೊಬ್ಬರು ಆಯ್ಕೆಯಾಗಿದ್ದರು. ಅವರನ್ನು ವಿಧಾನ ಸಭೆಗೆ ಕಳುಹಿಸುವಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಪರಿಶ್ರಮವೇ ಪ್ರಮುಖ ಕಾರಣವಾಗಿತ್ತು. ಹಿಂದುತ್ವದ ಅಜೆಂಡಾವನ್ನೇ ಮೂಲೆಗುಂಪಾಗಿ ಮಾಡಿರುವ ಆ ವ್ಯಕ್ತಿಯನ್ನು ಸೋಲಿಸುವ ಮೂಲ ಉದ್ದೇಶದಿಂದಲೇ ಮತ್ತೆ ಪ್ರಮೋದ್ ಮುತಾಲಿಕ್ ಕಾರ್ಕಳಕ್ಕೆ ಬಂದಿದ್ದಾರೆ. ಸಂಘಟನೆಯಲ್ಲಿ ಇದ್ದಾಗ ಅವರಲ್ಲಿ ಹಿಂದುತ್ವದ ತತ್ವ-ಸಿದ್ಧಾಂತಗಳು ಮರೆಯಾಗಿದೆ. ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗೋ ಹತ್ಯೆ, ಮತಾಂತರ, ಲವ್ ಜಿಹಾದ್ ಪ್ರಕರಣಗಳು ಎಲ್ಲೇ ಮೀರಿದೆ. ಅದನ್ನೆಲ್ಲ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಬೆಳ್ತಂಗಡಿ: ಸಾರಿಗೆ ಬಸ್ ಹಾಗೂ ಬೈಕ್ ನಡುವೆ  ಅಪಘಾತ ;  ಬೈಕ್‌ ಸವಾರ ಸ್ಥಳದಲ್ಲೇ ಸಾವು – Vishwanews24

ಹಲವು ಆರೋಪಗಳು, ಭ್ರಷ್ಟಾಚಾರಗಳು ಇವರ ಮೇಲಿದೆ. ಪೂರಕ ದಾಖಲೆಗಳು ಚುನಾವಣಾ ಸಂದರ್ಭದಲ್ಲಿ ಬಹಿರಂಗಪಡಿಸುವುದಾಗಿ ಶಪಥಗೈದಿದ್ದಾರೆ. ನಾವು ಮಾಡುತ್ತಿರುವ ಆರೋಪಗಳಿಗೆ ಉತ್ತರಿಸುವ ಧೈರ್ಯ ತೋರದ ಜನಪ್ರತಿನಿಧಿಯೂ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರೊಂದಿಗಿದ್ದ ಕಾರ್ಯಕರ್ತರು ಹಾಗೂ ಮುಖಂಡರ ವಿರುದ್ಧ ಹಗೆತನಕ್ಕೆ ಮುಂದಾಗುತ್ತಿರುವುದು ಹತಾಶತನವೆದಂದು ಲೇವಡಿ ಮಾಡಿದರು.

ಹಿಂದುತ್ವದಿಂದಲೇ ನೀವು ರಾಜ್ಯದ ಪ್ರಮುಖ ಹುದ್ದೆಯನ್ನು ಅಲಂಕರಿಸಿದ್ದೀರಿ ಎಂಬುವುದನ್ನು ಮರೆಯದಿರಿ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಎಸೆಯುವ ಪ್ರಯತ್ನ ಮಾಡದಿರಿ. ಶ್ರೀರಾಮ ಸೇನಾ ಕಾರ್ಯಕರ್ತರು ಹಿಂದುತ್ವಕ್ಕಾಗಿ ಹಲವು ಕೇಸುಗಳನ್ನು ಎದುರಿಸುತ್ತಿದ್ದಾರೆ. ನಮಗೆ ಯಾವುದೇ ಪಕ್ಷ ಮುಖ್ಯವಲ್ಲ. ಹಿಂದುತ್ವ, ದೇಶ, ಭ್ರಷ್ಟಾಚಾರ ರಹಿತ ಆಡಳಿತ ಮುಖ್ಯ ಎಂದರು.

ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಆನಂದ ಅಡ್ಯಾರು, ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ವಕೀಲ ಹರೀಶ್ ಅಧಿಕಾರಿ, ಕಾರ್ಕಳ ಪುರಸಭಾ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ, ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.

ಹಣಕಾಸಿನ ವಿಚಾರದಲ್ಲಿ ತೊಂದರೆ : ನೋಡಿ ಇಂದಿನ ದಿನ ಭವಿಷ್ಯ -Vishwanews24 

Leave a Reply