ಕಾರ್ಕಳ: ವಿದ್ಯಾರ್ಥಿನಿಗೆ ಭರಿತ ಜ್ಯೂಸ್ ನೀಡಿ ಅತ್ಯಾಚಾರ : ಆರೋಪಿಯ ಬಂಧನ -Vishwanews24
ಕಾರ್ಕಳ: ವಿದ್ಯಾರ್ಥಿನಿಗೆ ಭರಿತ ಜ್ಯೂಸ್ ನೀಡಿ ಅತ್ಯಾಚಾರ : ಆರೋಪಿಯ ಬಂಧನ -Vishwanews24
ಕಾರ್ಕಳ: ಕಾಲೇಜಿಗೆ ಬಿಡುತ್ತೇನೆಂದು ನಂಬಿಸಿ ವಿದ್ಯಾರ್ಥಿನಿಯೊಬ್ಬಳನ್ನು ಕಾರಿನಲ್ಲಿ ಕುಳಿರಿಸಿ ಅಮಲು ಭರಿತ ಜ್ಯೂಸ್ ಕುಡಿಸಿ ನೇರವಾಗಿ ಉಪ್ಪಿನಂಗಡಿ ಬಂದಾರು ಮನೆಯೊಂದರಲ್ಲಿ ಕೂಡಿ ಹಾಕಿ ಅತ್ಯಾಚಾರಗೈದು ಬ್ಲಾಕ್ಮೇಲ್ ಮಾಡಿ ಆಕೆಯ ಜೀವದೊಂದಿಗೆ ನಿರಂತರವಾಗಿ ಚೆಲ್ಲಾಟ ನಡೆಸುತ್ತಿದ್ದ ಆರೋಪಿ ಉಪ್ಪಿನಂಗಡಿಯ ಪ್ರಾಣೇಶ್(38) ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಉಪ್ಪಿನಂಗಡಿ ಬಂದಾರಿನ ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ವೆಸಗಿದ ಆರೋಪಿ ಪ್ರಾಣೇಶ್ ಆಕೆಗೆ ಬೆದರಿಕೆಯೊಡ್ಡಿ ನಿನ್ನ ನಗ್ನ ಚಿತ್ರಗಳು ಸೆರೆ ಹಿಡಿದಿದ್ದೇನೆ. ಯಾರಿಗಾದರೂ ವಿಚಾರ ತಿಳಿಸಿದರೆ ಅದನ್ನು ಬಿಡುಗಡೆ ಮಾಡುವುದಾಗಿ ಬ್ಲಾಕ್ಮೇಲ್ ಮಾಡಿದ್ದಾನೆ. ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಳು.
ಮಾನಕ್ಕೆ ಅಂಜಿದ ಯುವತಿ ಆತನ ಕೃತ್ಯವನ್ನು ಇತರರಿಗೆ ತಿಳಿಸದೇ ಮೌನಕ್ಕೆ ಶರಣಾಗಿದ್ದಳು. ಅದನ್ನೇ ಬಂಡವಾಳವನ್ನಾಗಿ ಮಾಡಿದ ಆರೋಪಿ ಪ್ರಾಣೇಶ್ ವಿದ್ಯಾರ್ಥಿನಿಗೆ ಅಗ್ಗಿಂದಾಗೆ ಕರೆ ಮಾಡಿ ಕರೆದಲ್ಲಿಗೆ ಬಾರದೇ ಹೋದಲ್ಲಿ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದನು ಎನ್ನಲಾಗಿದೆ.
ಅಲ್ಲದೆ ಜನವರಿ 12 ರಂದು ಯುವತಿ ಕಾರ್ಕಳಕ್ಕೆ ಕಂಪ್ಯೂಟರ್ ಕ್ಲಾಸಿಗೆ ಬಂದ ಸಮಯ ಬೈಲೂರಿಗೆ ಬರುವಂತೆ ಬೆದರಿಸಿದ್ದು, ಹೆದರಿಕೆಯಿಂದ ಬೈಲೂರಿಗೆ ಹೋದಾಗ ಅಲ್ಲಿಗೆ ಬಂದ ಪ್ರಾಣೇಶ್ ಆಕೆಯನ್ನು ಮೋಟಾರು ಸೈಕಲಿನಲ್ಲಿ ಕುಳ್ಳಿರಿಸಿಕೊಂಡು ಗುಡ್ಡೆಯಂಗಡಿ ಬಳಿ ಆತನು ಕೆಲಸ ಮಾಡುತ್ತಿರುವ ಮ್ಹಾಲಿಕರ ಮನೆಗೆ ಕರೆದುಕೊಂಡು ಅತ್ಯಾಚಾರ ನಡೆಸಿರುತ್ತಾನೆ ಎಂದು ದೂರಿನಲ್ಲಿ ಆರೋಪಿಸಿದ್ದಳು.
ಯುವತಿಯ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿದ್ದ ಕಾರ್ಕಳ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
