ಕಾರ್ಕಳ: ವಿಷ್ಣು ಮೂರ್ತಿ ದೇವಾಲಯಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ – Vishwanews24
ಕಾರ್ಕಳ: ವಿಷ್ಣು ಮೂರ್ತಿ ದೇವಾಲಯಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ
ಕಾರ್ಕಳ : ಕಾರ್ಕಳ ತಾಲೂಕಿನ ಎರ್ಲಪಾಡಿ ಕರ್ವಾಲು ವಿಷ್ಣು ಮೂರ್ತಿ ದೇವಾಲಯಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ರವಿಶಾಸ್ತ್ರಿ ಮಂಗಳವಾರ ಭೇಟಿ ನೀಡಿದರು.
ಅವರ ಸಂಬಂಧಿಗಳಾದ ಸಂತೋಷ್ ಶಾಸ್ತ್ರಿ , ಕವಿತಾ ಶಾಸ್ತ್ರೀ ಹಾಗೂ ಕುಟುಂಬದವರು ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ , ಕಲ್ಪೋಕ್ತ ಪೂಜೆ , ನಾಗತಂಬಿಲ ಸೇವೆ ಅರ್ಪಿಸಿದರು ಬಳಿಕ ವಿಷ್ಣು ಮೂರ್ತಿ ದೇವರಿಗೆ ಮಹಾಪೂಜೆ ಸಲ್ಲಿಸಲಾಯಿತು. ನರಸಿಂಹ ತಂತ್ರಿ ಹಾಗೂ ಅಶೋಕ್ ಕಾರಂತ್ ಪೂಜಾ ವಿಧಿ ವಿಧಾನ ನೆರವೇರಿಸಿದರು.
ಕಾಪು : ತಾಲೂಕು ವ್ಯಾಪ್ತಿಯಲ್ಲಿ ಸ್ಮಶಾನದ ಜಮೀನಿಗೆ ಅರ್ಜಿ ಸಲ್ಲಿಸಿ – Vishwanews24
