ಕಾರ್ಕಳ : ಸುಮೇಧಾ ಫ್ಯಾಶನ್ನಲ್ಲಿ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗಾಗಿ ಉಚಿತ ತರಬೇತಿ – Vishwanews24
ಕಾರ್ಕಳ : ಸುಮೇಧಾ ಫ್ಯಾಶನ್ನಲ್ಲಿ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗಾಗಿ ಉಚಿತ ತರಬೇತಿ
ಕಾರ್ಕಳ : ನಗರದ ಮುಖ್ಯರಸ್ತೆಯಲ್ಲಿರುವ ಎಸ್. ಜೆ. ಆರ್ಕೇಡ್ನ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮೇಧಾ ಫ್ಯಾಶನ್ ಇನ್ಸಿಟ್ಯೂಟ್ ಮತ್ತು ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಸಹಯೋಗದೊಂದಿಗೆ ನಬಾರ್ಡ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಉಚಿತವಾಗಿ ಡಿಸೈನ್ ಫ್ಯಾಬ್ರಿಕ್ ಪೇಂಟಿಂಗ್ ಮತ್ತು ಆರಿ ವರ್ಕ್ ಎಂಬ್ರಾಯಿಡರಿ ತರಬೇತಿ ನೀಡಲಾಗುವುದು.
ಏ. 10ರಿಂದ 25ರವರೆಗೆ ತರಬೇತಿ ನಡೆಯಲಿದ್ದು, 18ರಿಂದ 45 ವರ್ಷ ವಯೋಮಿತಿಯವರು ತರಬೇತಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ತರಬೇತಿಯ ಸಂದರ್ಭದಲ್ಲಿ ಉಚಿತವಾಗಿ ಮೆಟಿರಿಯಲ್, ಊಟ-ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಬೆಳಗ್ಗೆ 10 ರಿಂದ ಸಂಜೆ 4ರ ತನಕ ತರಬೇತಿಯು ನಡೆಯಲಿದ್ದು, ಫ್ಯಾಬ್ರಿಕ್ ಪೇಂಟಿಂಗ್, ಬ್ಲೌಸ್ ಲಿಕ್ವಿಡ್ ಎಂಬ್ರಾಯಿಡರಿ ಮತ್ತು ಆರಿ ವರ್ಕ್ ಬ್ಲೌಸ್ ಮತ್ತು ಟಾಪ್, ಕ್ಲೇ ಜ್ಯುವೆಲ್ಲರಿ, ಸಾರೀ ವರ್ಕ್ ಹಾಗೂ ಬ್ಯಾಗ್ ಪೇಂಟಿಂಗ್ ತರಬೇತಿ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಮತ್ತು ನೋಂದಾವಣೆ ಮಾಡಲು 7349791873 – 70220 44193 ಸಂಪರ್ಕಿಸುವಂತೆ ಸುಮೇಧಾ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.
ಉಡುಪಿ: ನಾಟ್ಯದ 108 ಕರಣಗಳ ಮೂಲಕ 8ನೇ ವಿಶ್ವದಾಖಲೆ ಬರೆದ ಯೋಗ ಸಾಧಕಿ ತನುಶ್ರೀ – Vishwanews24
