ಕಾರ್ಕಳ: ಹೆರಿಗೆ ಸಂದರ್ಭ ಅಧಿಕ ರಕ್ತಸ್ರಾವ : ಹೆಡ್ ಕಾನ್ ಸ್ಟೇಬಲ್ ಶ್ಯಾಮಲಾ ನಿಧನ -Vishwanews24
ಉಡುಪಿ : ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಶ್ಯಾಮಲಾ ಹೆರಿಗೆ ಸಂದರ್ಭ ಅಧಿಕ ರಕ್ತಸ್ರಾವದಿಂದಾಗಿ ನಿಧನ ಹೊಂದಿದ್ದಾರೆ.
ಮಾ.3ರಂದು ಕಾರ್ಕಳ ರೋಟರಿ ಆಸ್ಪತ್ರೆಗೆ ದಾಖಲಾಗಿದ್ದ ಶ್ಯಾಮಲಾ ಅವರಿಗೆ ಮಂಗಳವಾರ ಮಧ್ಯಾಹ್ನ ಹೆರಿಗೆಯಾಯಿತು. ಈ ಸಂದರ್ಭ ಗರ್ಭಿಣಿ ದೇಹದಲ್ಲಿ ಅಧಿಕ ರಕ್ತಸ್ರಾವವಾಗಿತ್ತು.
ತಕ್ಷಣ ಇಲ್ಲಿನ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇರದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಶ್ಯಾಮಲಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಮೃತಪಟ್ಟರು.
ಶ್ಯಾಮಲಳ ಪತಿ ಗಿರಿಧರ್ ಕೂಡ ಪೊಲೀಸ್ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ,ವರ್ಷಗಳ ಹಿಂದೆಷ್ಟೆ ಇವರ ಮದುವೆ ಆಗಿದ್ದು ಚೊಚ್ಚಲ ಹೆರಿಗೆ ಸಂದರ್ಭ ಸರಿಯಾದ ಚಿಕಿತ್ಸೆ ಲಭಿಸದ ಕಾರಣ ಗರ್ಭಿಣಿ ಕೊನೆಯುಸಿರು ಎಳೆಯುವಂತಾಗಿದೆ.
