ಕಾಸರಗೋಡು: ವಿದ್ಯುತ್ ಶಾಕ್ ; ಯುವಕ ಮೃತ್ಯು – vishwanews24
ಕಾಸರಗೋಡು: ವಿದ್ಯುತ್ ಶಾಕ್ ; ಯುವಕ ಮೃತ್ಯು
ಕಾಸರಗೋಡು: ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ಹೊಸಬೆಟ್ಟುವಿನಲ್ಲಿ ಸೋಮವಾರ ಸಂಜೆ ನಡೆದಿದೆ.
ಮಂಜೇಶ್ವರ ಹೊಸಬೆಟ್ಟುವಿನ ನಿವಾಸಿ ಯಶವಂತ (21) ಮೃತ ದುರ್ದೈವಿ.
ಸಂಜೆ ಮನೆಯ ಟೆರೇಸ್ ನಲ್ಲಿ ಬಿದ್ದಿದ್ದ ಮಡಲನ್ನು ತೆಗೆಯಲು ತೆರಳಿದ್ದ ಯಶವಂತ, ಮರದ ಹತ್ತಿರದಲ್ಲೇ ಹಾದು ಹೋಗಿದ್ದ ಹೈಟೆನ್ಷನ್ ತಂತಿಯಿಂದ ಶಾಕ್ ತಗುಲಿ ಅಲ್ಲೇ ಕುಸಿದು ಬಿದ್ದಿದ್ದಾನೆ. ಯಶವಂತ ಸುಮಾರು ಹೊತ್ತು ಕಳೆದರೂ ಮರಳಿ ಬಾರದಿದ್ದುದರಿಂದ ಸಹೋದರಿ ಟೆರೇಸ್ ಗೆ ಹತ್ತಿ ನೋಡಿದಾಗ ಯಶವಂತ ಬಿದ್ದಿರುವುದು ಕಂಡುಬಂದಿದೆ.
ಕುಂದಾಪುರ: ದೇವಸ್ಥಾನದಲ್ಲಿ ಕಳ್ಳತನವಾದ ಹಣ ಶಾಲೆಯಲ್ಲಿ ಪತ್ತೆ – vishwanews24
ಬಳಿಕ ಸ್ಥಳೀಯ ವಾಸಿಗಳು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಯುವಕ ಯಶವಂತ ಅವರು ಮೃತ ಪಟ್ಟಿದ್ದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿಯ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಯಶವಂತ ಉಪ್ಪಳ ಶಾಲಾ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಎರಡು ವರ್ಷಗಳಿಂದ ಉದ್ಯೋಗ ಮಾಡುತ್ತಿದ್ದು, ಸಂಜೆ ಕೆಲಸಕ್ಕೆ ತೆರಳಲು ಸಿದ್ದತೆ ನಡೆಸುತ್ತಿದ್ದ. ಈ ನಡುವೆ ಟೆರೇಸ್ ನ ಮೇಲೆ ಬಿದ್ದಿದ್ದ ಮಡಲನ್ನು ತೆಗೆಯಲು ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕಾಪು : ಆಸ್ತಿ ವಿವಾದ ಪ್ರಕರಣ – 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆ ಮುಂಬೈನಲ್ಲಿ ಅರೆಸ್ಟ್ – vishwanews24
