ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಕನ್ನಡ ಕಲಿತು ನಟಿಸಿದ ನಟಿ ಜಾಕ್ವೆಲಿನ್ ಫರ್ನಾಂಡೀಸ್ -Vishwanews24
ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಕನ್ನಡ ಕಲಿತು ನಟಿಸಿದ ನಟಿ ಜಾಕ್ವೆಲಿನ್ ಫರ್ನಾಂಡೀಸ್ -Vishwanews24
ಬೆಂಗಳೂರು: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಸ್ಯಾಂಡಲ್ವುಡ್ ನಟ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಷಯವಾಗಿದೆ. ಆದರೆ ಈ ನಟಿ ಸಿನಿಮಾಕ್ಕಾಗಿ ಕನ್ನಡವನ್ನು ಕಲಿತು ಸುದ್ದಿಯಾಗಿದ್ದಾರೆ.
ಕಿಚ್ಚ ಸುದೀಪ್ ನಟನೆಯ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣಾಗಾಗಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದಾರೆ. ಚಿತ್ರದಲ್ಲಿ ಜಾಕ್ವೆಲಿನ್ ಒಂದು ಹಾಡಿಗೆ ನೃತ್ಯವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇವರು ಕೆಲವು ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರಂತೆ. ಅದಕ್ಕಾಗಿ ಅವರು ಕನ್ನಡವನ್ನು ಕಲಿತು ನಟಿಸಿದ್ದಾರೆ ಎಂಬ ಮಾಹಿತಿ ವಿಕ್ರಾಂತ್ ರೋಣ ಸೆಟ್ನಿಂದ ಸಿಕ್ಕಿದೆ.
ವಿಕ್ರಾಂತ್ ರೋಣ ಭಾರತೀಯ ಕಥೆಯನ್ನು ವಿಶ್ವಮಟ್ಟದಲ್ಲಿ ಹೇಳುವಂತಹ ಪ್ರಯತ್ನವಾಗಿದೆ. ನಾನು ಈ ಸಿನಿಮಾ ಭಾಗವಾಗಿದ್ದು ಖುಷಿಯ ವಿಚಾರವಾಗಿದೆ. ಸಿನಿಮಾದಲ್ಲಿ ನಾನು ಇರುವ ದೃಶ್ಯಗಳು ಮತ್ತು ಹಾಡು ಅದ್ಭುತವಾಗಿ ಮೂಡಿಬಂದಿದೆ ಎಂದು ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ನಮ್ಮ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಬಹಳ ವಿಶೇಷ ಎಂದು ನಮಗೆ ಅನಿಸುತ್ತದೆ. ಈ ಹಾಡು ಮತ್ತು ಅವರು ಕಾಣಿಸಿಕೊಂಡಿರುವ ಅಷ್ಟೂ ದೃಶ್ಯಗಳು ನೋಡುಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಇದಕ್ಕಾಗಿ ಬೆಂಗಳೂರಿನ ಕಂಠೀರವ ಸೆಟ್ನಲ್ಲಿ ಆರು ದಿನಗಳ ಕಾಲ ವಿಭಿನ್ನವಾದ ಸೆಟ್ ಹಾಕಿ ಚಿತ್ರೀಕರಿಸಿದ್ದೇವೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಆರು ದಿನಗಳ ಕಾಲ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ ಡೈಲಾಗ್ಗಳನ್ನು ಪ್ರಾಕ್ಟೀಸ್ ಮಾಡಿಕೊಂಡು ಬಂದು ಹೇಳಿದ್ದಾರೆ. ಅವರು ಇರುವ ದೃಶ್ಯಗಳಿಗೆ ಅವರಿಂದಲೇ ಡಬ್ಬಿಂಗ್ ಮಾಡಿಸಬೇಕು ಎನ್ನುವ ಪ್ಲ್ಯಾನ್ ಇದೆ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.
