ಕಿತ್‌ನಾ ಅಚ್ಛಾ ಹೇ ಮೋದಿ : ಮೋದಿ ಜೊತೆ ಆಸ್ಟ್ರೇಲಿಯಾ ಪ್ರಧಾನಿ ಸೆಲ್ಫಿ ..-Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಒಸಾಕಾ, : ದೇಶದ ಅಭಿವೃದ್ದಿ, ಭಯೋತ್ಪಾದನೆ ವಿರುದ್ದ ಹೋರಾಟ ವಾಣಿಜ್ಯ ಸಮರಕ್ಕೆ ತೆರೆ ಎಳೆಯುವ ಗುರಿ ಮುಂತಾದ ಉದ್ದೇಶವನ್ನು ಇಟ್ಟುಕೊಂಡು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಗೆ ಜಿ-20 ಶೃಂಗ ಸಭೆಯಲ್ಲಿ ಮೊದಲ ದಿನವೇ ನಿರೀಕ್ಷೆಗೂ ಮೀರಿ ಫಲ ಸಿಕ್ಕಿದೆ.

ಜಪಾನ್‌ನ ಜಿ-20 ಶೃಂಗ ಸಭೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಲವು ದೇಶದ ದಿಗ್ಗಜ ನಾಯಕರು ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾ ಪ್ರಧಾನಿಯೂ ಹೊರತಾಗಿಲ್ಲ.

ಹೌದು ಜಾಗತಿಕ ನಾಯಕನಾಗಿ ಮಿಂಚುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕೋಟ್‌ ಮೊರಿಸನ್‌ ಅವರು ಸೆಲ್ಫಿ ತೆಗೆದುಕೊಂಡು ” ಕಿತ್ನಾ ಅಚ್ಛಾ ಹೇ ಮೋದಿ ” ಎಂದು ಮಾಡಿರುವ ಟ್ವೀಟ್‌ ವೈರಲ್‌ ಆಗಿದೆ.

ಉಭಯ ರಾಷ್ಟ್ರಗಳಲ್ಲೂ ಚುನಾವಣೆ ನಡೆದ ನಂತರದಲ್ಲಿ ಉಭಯ ನಾಯಕರ ಮೊದಲ ಭೇಟಿ ಇದಾಗಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದ ನಂತರದಲ್ಲಿ ದೂರವಾಣಿ ಕರೆ ಮಾಡಿದ್ದ ಸ್ಕಾಟ್​ ಮಾರಿಸನ್, ಅವರನ್ನು ಅಭಿನಂದಿಸಿದ್ದರು. ಅದರಂತೆ ಇತ್ತೀಚಿಎಗೆ ನಡೆದ ಚುನಾಔಣೆಯಲ್ಲಿ ಮಾರಿಸನ್​ ಆಯ್ಕೆಯಾಗುತ್ತಲೇ ಕರೆ ಮಾಡಿದ್ದ ಮೋದಿ, ಅವರನ್ನು ಅಭಿನಂದಿಸಿದ್ದರು