ಕಿನ್ನಿಗೋಳಿ: ಆಟೋಗೆ ಬೈಕ್ ಢಿಕ್ಕಿ – ಸವಾರ ಸಾವು :- Vishwanews24

Featured, ದಕ್ಷಿಣ ಕನ್ನಡ

ಕಿನ್ನಿಗೋಳಿ: ಆಟೋಗೆ ಬೈಕ್ ಢಿಕ್ಕಿ – ಸವಾರ ಸಾವು

ಕಿನ್ನಿಗೋಳಿ : ಬೈಕ್ ಸವಾರನೋರ್ವ ಪೆಟ್ರೋಲ್ ಬಂಕ್ ಬಳಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಮಂಗಳೂರಿನ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ಕೊಯಿಕುಡೆ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ಮೃತ ಬೈಕ್ ಸವಾರನನ್ನು ಕೋಲ್ನಾಡು ಸಸಿತೋಟ ನಿವಾಸಿ ಶರತ್ ಶೆಟ್ಟಿ (49) ಎಂದು ಗುರುತಿಸಲಾಗಿದೆ.

ಮೃತ ಶರತ್ ಶೆಟ್ಟಿ ಹಳೆಯಂಗಡಿಯ ಸಂಸ್ಥೆಯೊಂದರಲ್ಲಿ ಚಾಲಕನಾಗಿ ದುಡಿಯುತ್ತಿದ್ದು ಕೆಲಸ ಮುಗಿಸಿ ವಾಪಸ್ ಬರುವ ವೇಳೆ ಪಕ್ಷಿಕೆರೆ ಕೊಯಿಕುಡೆ ಪೆಟ್ರೋಲ್ ಬಂಕ್ ಬಳಿ ವಿರುದ್ಧ ದಿಕ್ಕಿನಿಂದ ಬಂದ ಆಟೋಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ಶರತ್ ಶೆಟ್ಟಿಯವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ತೀರ್ಮಾನಗಳಲ್ಲಿ ಎಚ್ಚರ 🌐 ನೋಡಿ ಇಂದಿನ ದಿನ ಭವಿಷ್ಯ -Vishwanews24

ಅಪಘಾತದಿಂದ ಆಟೋ ಹಾಗೂ ಬೈಕ್ ಜಖಂಗೊಂಡಿದೆ. ಮೃತ ಶರತ್ ಕೊಲ್ನಾಡು ಸಸಿತೋಟ ನಿವಾಸಿಯಾಗಿದ್ದು, ಪಕ್ಷಿಕೆರೆಯಲ್ಲಿ ಪ್ಲಾಟ್‌ನಲ್ಲಿ ವಾಸವಿದ್ದರು, ಈ ಹಿಂದೆ ಮುಂಬೈನಲ್ಲಿ ವಾಸ್ತವ್ಯವಿದ್ದು ಇತ್ತೀಚೆಗಷ್ಟೇ ಊರಿನಲ್ಲಿ ನೆಲೆಸಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಈ ಬಗ್ಗೆ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೀರ್ಮಾನಗಳಲ್ಲಿ ಎಚ್ಚರ 🌐 ನೋಡಿ ಇಂದಿನ ದಿನ ಭವಿಷ್ಯ -Vishwanews24

Leave a Reply