ಕಿನ್ನಿಗೋಳಿ : ಮುಚ್ಚಿ ಹೋದ ಬಾವಿಯಲ್ಲಿ 300 ವರ್ಷಗಳ ಹಳೆಯ ದೈವಗಳ ಪರಿಕರಗಳು ಪತ್ತೆ -Vishwanews24

Featured, ದಕ್ಷಿಣ ಕನ್ನಡ

ಕಿನ್ನಿಗೋಳಿ : ಮುಚ್ಚಿ ಹೋದ ಬಾವಿಯಲ್ಲಿ 300 ವರ್ಷಗಳ ಹಳೆಯ ದೈವಗಳ ಪರಿಕರಗಳು ಪತ್ತೆ -Vishwanews24

ಮಂಗಳೂರು,:  ಕಿನ್ನಿಗೋಳಿಯಲ್ಲಿ ಮುಚ್ಚಿ ಹೋದ ಬಾವಿ ಉತ್ಖನನದ ವೇಳೆ 300 ವರ್ಷಗಳ ಹಿಂದಿನ ದೈವಗಳ ಪರಿಕರ ಪತ್ತೆಯಾದ ಘಟನೆ ನಡೆದಿದೆ.

ಕಾಲ ಕ್ರಮೇಣ ಜೀರ್ಣಾವಸ್ಥೆಗೆ ತಲುಪಿದ್ದ ದೇವಸ್ಥಾನ ಇದೀಗ ಜೀರ್ಣೋದ್ಧಾರದ ಮ‌ೂಲಕ ಬೆಳಕಿಗೆ ಬಂದಿದ್ದು, ಈ ಜೀರ್ಣೋದ್ಧಾರದ ಸಂದರ್ಭದಲ್ಲಿ ದೈವ ನೀಡಿದ್ದ ನುಡಿ ಸತ್ಯವಾಗಿದೆ. ಈ ಘಟನೆ ಕಿನ್ನಿಗೋಳಿ ಸಮೀಪದ ಬಳ್ಕುಂಜೆಯ ಮೂಡಾಯಿಗುತ್ತು ಮನೆಯಲ್ಲಿ ನಡೆದಿದ್ದು, ಮುಚ್ಚಿ ಹೋದ ಬಾವಿಯಲ್ಲಿ ದೈವಗಳ ಪರಿಕರ ಪತ್ತೆಯಾಗಿದೆ.

ಹಲವಾರು ತೊಂದರೆ ಎದುರಿಸುತ್ತಿದ್ದ ಈ ಕುಟುಂಬದವರು ಕೊನೆಗೆ ದೈವ – ದೇವರುಗಳ ಮೊರೆ ಹೋಗಿದ್ದು, ದೈವ ದರ್ಶನದ ವೇಳೆ ‘ಹಿಂದೆ ಮುಚ್ಚಿ ಹೋಗಿರುವ ಬಾವಿ ಅಗೆದು ನೋಡಿ’ ಎಂದು ನುಡಿ ನೀಡಿದೆ.

ಮೂಡಾಯಿಗುತ್ತು ಮನೆಯವರು, ಸತ್ಯ ದೇವತೆ, ಅಣ್ಣಪ್ಪ ಪಂಜುರ್ಲಿ ಜೀರ್ಣೋದ್ಧಾರ ಮಾಡಿದ್ದು, ಈ ವೇಳೆ ದಿವಾಕರ ಪೂಜಾರಿ ಅವರ ದರ್ಶನದಲ್ಲಿ ದೈವದ ನುಡಿಯಲ್ಲಿ ಬಾವಿ ತೋಡುವಂತೆ ಹೇಳಿದ್ದಾರೆ. ಇದರಂತೆ ಮುಚ್ಚಿ ಹೋದ ಬಾವಿಯನ್ನು ಮತ್ತೆ ತೋಡಿದಾಗ ಬಾವಿಯಲ್ಲಿ ಲ್ಲಿ 300 ವರ್ಷಗಳ ಹಿಂದಿನ ದೈವದ ಮೂರ್ತಿ, ಆಭರಣ, ಕತ್ತಿ ದೊರಕಿದೆ.

ಪೊಳಲಿ ರಾಜರಾಜೇಶ್ವರಿ ಅಮ್ಮನವರ ಸಮ್ಮುಖದಲ್ಲಿ ವಿಕ್ಕಿ ಶೆಟ್ಟಿಯವರಿಂದ ಅನಾರೋಗ್ಯ ಪೀಡಿತ ಮಗುವಿನ ಚಿಕಿತ್ಸೆಗಾಗಿ ಸಹಾಯ ಧನ ಹಸ್ತಾಂತರ -Vishwanews24