ಕಿರುತೆರೆಯಲ್ಲಿ ಮನೆಮಾತಾಗಿರುವ ಪ್ರಸಿದ್ಧ ‘ಕಮಲಿ’ ಧಾರಾವಾಹಿ ನಿರ್ದೇಶಕರ ವಿರುದ್ಧ ವಂಚನೆ ಆರೋಪ – Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಕಿರುತೆರೆಯಲ್ಲಿ ಮನೆಮಾತಾಗಿರುವ ‘ಕಮಲಿ’ ಧಾರಾವಾಹಿಯ ನಿರ್ದೇಶಕನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

ಕಮಲಿ ನಿರ್ಮಾಪಕ ರೋಹಿತ್ ಅವರಿಗೆ ನಿರ್ದೇಶಕ ಅರವಿಂದ್ ಕೌಶಿಕ್ ಎಂಬುವರು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಕಮಲಿ ಧಾರಾವಾಹಿಗೆ ನಿರ್ಮಾಪಕ ರೋಹಿತ್​, 73 ಲಕ್ಷ ಬಂಡವಾಳ ಹೂಡಿಕೆ ಮಾಡಿಸಿದ್ದಾರಂತೆ. ಹೂಡಿಕೆಯ ನಂತರ ಲಾಭಾಂಶ ಹಾಗೂ ಬಂಡವಾಳ ವಾಪಸ್ ನೀಡಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೇ 28 , 2018 ರಂದು ಕಮಲಿ ಧಾರಾವಾಹಿ ಶುರುವಾಗಿತ್ತು. ಸುಮಾರು 287 ಸಂಚಿಕೆಗಳ ಕಾಲ ರೋಹಿತ್​​ರನ್ನು ನಿರ್ಮಾಪಕನೆಂದು ತೋರಿಸಲಾಗಿತ್ತು. ನಂತರ ಧಾರವಾಹಿಯ ಟೈಟಲ್ ಕಾರ್ಡ್​ನಿಂದ ರೋಹಿತ್ ಹೆಸರನ್ನು ಧಾರಾವಾಹಿ ತಂಡ ತೆಗೆದಿದೆ. ಈ ಮಧ್ಯೆ ನಿರ್ದೇಶಕ ಕೌಶಿಕ್​, ತನ್ನ ಪತ್ನಿ ಶಿಲ್ಪಾ ಹಾಗೂ ನವೀನ್​ ಸಾಗರ್​ ಹೆಸರಿನಲ್ಲಿ ಸತ್ವ ಮೀಡಿಯಾ ಎಂದು ಅಗ್ರಿಮೆಂಟ್ ಮಾಡಿಕೊಂಡು ಲಾಭ ಪಡೆದಿದ್ದಾರೆ. ಧಾರವಾಹಿಗೆ 73 ಲಕ್ಷ ರೂ. ಹಣ ಹೂಡಿಕೆ ಮಾಡಿದ ನನ್ನ ಗಮನಕ್ಕೆ ತರದೇ ವಂಚನೆ ಮಾಡಿದ್ದಾರೆ ಎಂದು ರೋಹಿತ್​ ಆರೋಪಿಸಿದ್ದಾರೆ.

ಸದ್ಯ ಕಮಲಿ ಧಾರಾವಾಹಿ 500 ಸಂಚಿಕೆಗಳನ್ನು ಪೂರೈಸಿದೆ. ಅಸಲಿಗೆ ಧಾರಾವಾಹಿ ನಿರ್ಮಾಣಕ್ಕೆ ಲಕ್ಷಗಟ್ಟಲೇ ಹಣ ಹೂಡಿಕೆ ಮಾಡಿದ್ದು ನಾನು. ಆದರೆ, ಲಾಭಾಂಶ ಹಾಗೂ ಹೂಡಿಕೆ ಮಾಡಿದ ಹಣ ವಾಪಸ್ ನೀಡದೇ ವಂಚಿಸುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರಿಗೆ ರೋಹಿತ್​ ದೂರು ದಾಖಲಿಸಿದ್ದಾರೆ