ಕುಂದಾಪುರ : ಕಳ್ಳತನಕ್ಕೆ ಯತ್ನಿಸುತ್ತಿರುವಾಗಲೇ ಆರೋಪಿ ಲಾಕ್ ; ಕಳ್ಳನನ್ನು 10 ನಿಮಿಷದಲ್ಲಿ ಸೆರೆ ಹಿಡಿದ ಪೊಲೀಸರು – vishwanews24

Featured, ಉಡುಪಿ

ಕುಂದಾಪುರ : ಕಳ್ಳತನಕ್ಕೆ ಯತ್ನಿಸುತ್ತಿರುವಾಗಲೇ ಆರೋಪಿ ಲಾಕ್ ; ಕಳ್ಳನನ್ನು 10 ನಿಮಿಷದಲ್ಲಿ ಸೆರೆ ಹಿಡಿದ ಪೊಲೀಸರು

ಗಂಗೊಳ್ಳಿ: ಹೊಸಾಡು ಶಾಖೆಯ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘದ ಕಿಟಿಕಿಯ ಸರಳು ಮುರಿದು ಕಳ್ಳತನ ನಡೆದಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದ 10 ನಿಮಿಷದಲ್ಲೇ ಕಳ್ಳನನ್ನು ಹಿಡಿದ ಘಟನೆ ಮುಳ್ಳಿಕಟ್ಟೆ ಎಂಬಲ್ಲಿ ನಡೆದಿದೆ.

ರಾತ್ರಿ ಸುಮಾರು 1.47 ಕ್ಕೆ ಮುಳ್ಳಿಕಟ್ಟೆಯಲ್ಲಿರುವ ಸಹಕಾರಿ ಸಂಘ ಕಿಟಕಿಯ ಗ್ರಿಲ್ ಒಡೆದು ಕಳ್ಳ ಒಳನುಗ್ಗಿದ್ದಾನೆ . ಕುಂದಾಪುರ ಅಂಕದಕಟ್ಟೆಯಲ್ಲಿರುವ ಸೈನ್ ಇನ್ ಸೆಕ್ಯುರಿಟಿಯ ಸಿಸಿಟಿವಿ ಲೈವ್ ಮಾನಿಟರಿಂಗ್ ನಲ್ಲಿ ಘಟನೆ ಬೆಳಕಿಗೆ ಬಂದು ಬೀಟ್ ಪೊಲೀಸರಿಗೆ ಮಾಹಿತಿ ನೀಡಲಾಯಿತು.

10 ನಿಮಿಷದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಕಳ್ಳನನ್ನು ಹಿಡಿದರು. ಕಳ್ಳ ಕೇರಳದಿಂದ ಬಂದವನು ಎನ್ನಲಾಗಿದೆ. ಪೊಲೀಸ್ ಇಲಾಖೆಯಿಂದ ಹೆಚ್ಚಿನ ಮಾಹಿತಿ ಕುರಿತು ತನಿಖೆ ನಡೆಯುತ್ತಿದೆ.

ಸೂರಜ್ ರೇವಣ್ಣ ಪ್ರಕರಣ : ನಮಗೆ ಅಧಿಕೃತ ದೂರು ಬಂದಿಲ್ಲ , ಬಂದ ಕೂಡಲೇ ಕ್ರಮ : ಪರಮೇಶ್ವರ್‌ – vishwanews24

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಲೈವ್ ಮಾನಿಟರಿಂಗ್ ಸಿಬ್ಬಂದಿ, ಗಂಗೊಳ್ಳಿ ಪೊಲೀಸರ ಸಮಯಪ್ರಜ್ಞೆಯಿಂದ ಕಳ್ಳನನ್ನು ತಕ್ಷಣ ಸೆರೆ ಹಿಡಿಯಲು ಸಾಧ್ಯವಾಗಿದೆ.

ಏನಿದು ಸೈನ್ ಇನ್ ಸೆಕ್ಯೂರಿಟಿ?:
ದೇವಸ್ಥಾನ, ಜ್ಯುವೆಲ್ಲರಿ, ಅಂಗಡಿ, ಮನೆ, ಫ್ಲ್ಯಾಟ್ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸುವುದು ಒಂದೆಡೆಯಾದರೆ, ಅಳವಡಿಸಿದ ಸಿಸಿ ಟಿವಿ ದೃಶ್ಯಾವಳಿಗಳನ್ನು ದಿನದ 24 ಗಂಟೆಯೂ ಸತತವಾಗಿ ಹದ್ದಿನ ಕಣ್ಣಿಟ್ಟು ಕಾಯುವುದು ಕಾರ್ಯಾಚರಣೆಯ ಇನ್ನೊಂದು ಭಾಗ, ಟಿವಿ, ಲ್ಯಾಪ್‌ಟಾಪ್ ಮೂಲಕ ನಿತ್ಯದ ಮಾನಿಟರಿಂಗ್ ವ್ಯವಸ್ಥೆಯನ್ನು ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆ ಕುಂದಾಪುರದ ಅಂಕದಕಟ್ಟೆಯಲ್ಲಿ ಮಾಡುತ್ತಿದೆ. ಇದರ ವ್ಯವಸ್ಥಾಪಕ ಕೃಷ್ಣ ಪೂಜಾರಿ ಅವರ ತಂಡ ಪೊಲೀಸರ ಮಾರ್ಗದರ್ಶನದಲ್ಲಿ ರಾತ್ರಿ -ಹಗಲು ಸಿಸಿ ಟಿವಿ ಕಣ್ಗಾವಲು ಕಾಯುತ್ತದೆ. 60 ಕ್ಯಾಮೆರಾಗಳ ಮಾನಿಟರಿಂಗ್ ಮಾಡುವ ಮೂಲಕ ಆರಂಭಗೊಂಡ ಈ ಸಂಸ್ಥೆ ಇದೀಗ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಅಳವಡಿಸಿರುವ ಬರೋಬ್ಬರಿ 450 ಕ್ಯಾಮೆರಾಗಳನ್ನು ಮಾನಿಟರಿಂಗ್ ಮಾಡುತ್ತಿದೆ. ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಹೆಚ್ಚಿನ ಧಾರ್ಮಿಕ ಸಂಸ್ಥೆಗಳು, ಕಾರ್ಖಾನೆಗಳು, ಉದ್ಯಮಗಳುಹಾಗೂ ಸಾರ್ವಜನಿಕರು ಈಗಾಗಲೇ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಗ್ರಾಹಕರಲ್ಲದೆ ತಮ್ಮ ವ್ಯಾಪ್ತಿಯೊಳಗೆ ಬರುವ ಸಾರ್ವಜನಿಕ ಸ್ಥಳಗಳಲ್ಲಿಯೂ ಈ ರೀತಿಯ ಪ್ರಯತ್ನ ಹಾಗೂ ಘಟನೆಗಳು ಕಂಡು ಬಂದಲ್ಲಿ ಸೆಕ್ಯುರಿಟಿ ಸಂಸ್ಥೆ ಸಂಬಂಧಿಸಿದವರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ.

ಕಾರ್ಕಳ: ತೆಂಗಿನಮರದಿಂದ ಅಕಸ್ಮಿಕವಾಗಿ ಬಿದ್ದು ವ್ಯಕ್ತಿ ಸಾವು – vishwanews24

Leave a Reply