ಕುಂದಾಪುರ: ಟ್ರಕ್‌ನ ಕೆಳಗೆ ಸಿಲುಕಿದ ಸ್ಕೂಟರ್  ; ಅದೃಷ್ಟವಶಾತ್ ತಾಯಿ, ಮಗಳು ಪ್ರಾಣಾಪಾಯದಿಂದ ಪಾರು – vishwanews24

Featured, ಉಡುಪಿ

ಕುಂದಾಪುರ: ಟ್ರಕ್‌ನ ಕೆಳಗೆ ಸಿಲುಕಿದ ಸ್ಕೂಟರ್  ; ಅದೃಷ್ಟವಶಾತ್ ತಾಯಿ, ಮಗಳು ಪ್ರಾಣಾಪಾಯದಿಂದ ಪಾರು

ಕುಂದಾಪುರ:ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಸಂಗಮ ಜಂಕ್ಷನ್ ಬಳಿ ಭಾನುವಾರ ಬೆಳಗ್ಗೆ ಟ್ರಕ್‌ನ ಕೆಳಗೆ ಸ್ಕೂಟರ್ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗಳಿಗೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಗೊಂಡವರನ್ನು ರೋಸಿ ಮತ್ತು ಆಕೆಯ ಮಗಳು ರೆನಿಸ್ ಎಂದು ಗುರುತಿಸಲಾಗಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಟ್ರಕ್ ಹರಿಯಾಣದಿಂದ ಕೊಝಿಕೋಗೆ ತೆರಳುತ್ತಿತ್ತು. ಡಿಕ್ಕಿಯ ರಭಸಕ್ಕೆ ಸ್ಕೂಟರ್ ನಜ್ಜುಗುಜ್ಜಾಗಿದೆ. ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply