ಕುಂದಾಪುರ : ತರಗತಿಯಲ್ಲಿ ಹಿಜಾಬ್, ಕೇಸರಿ ಶಾಲು ಧರಿಸಿ ಹಾಜರಾಗುವಂತಿಲ್ಲ : ಕಾಲೇಜು ಎಸ್‌ಬಿ ಸಿ ಸಭೆಯಲ್ಲಿ ಮಹತ್ವದ ನಿರ್ಧಾರ – Vishwanews24

Featured, ದಕ್ಷಿಣ ಕನ್ನಡ

ಕುಂದಾಪುರ : ಶಾಲಾ ಆವರಣಕ್ಕೆ ಹಿಜಾಬ್, ಕೇಸರಿ ಶಾಲು ಧರಿಸಿ ಬರೋದಕ್ಕೆ ಅವಕಾಶ

ತರಗತಿ ಒಳಗೆ ಹಿಜಾಬ್, ಕೇಸರಿ ಶಾಲು ಧರಿಸೋದಕ್ಕೆ ಅವಕಾಶ ಇಲ್ಲ

ಕುಂದಾಪುರ: ಹಿಜಾಬ್ ಹಾಗೂ ಕೇಸರಿ ಶಾಲು ಧರಿಸೋ ವಿವಾದ ತಾರಕಕ್ಕೇರಿದ್ದು, ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಸಂಬಂಧ ಇಂದು ಶಾಲಾ ಆಡಳಿತ ಮಂಡಳಿ ಹಾಗೂ ಎಸ್‌ಡಿಎಂಸಿ ಸದಸ್ಯರು ಸಭೆ ನಡೆಸಿ, ಹಿಜಾಬ್, ಕೇಸರಿ ಶಾಲು ಧರಿಸಿ ಕಾಲೇಜು ಗೇಟಿನ ಒಳಗೆ ಬರಬಹುದು. ಆದ್ರೇ ತರಗತಿಯಲ್ಲಿ ಹಿಜಾಬ್, ಕೇಸರಿ ಶಾಲು ಧರಿಸಿ ಹಾಜರಾಗುವಂತಿಲ್ಲ ಎಂದು ತಿರ್ಮಾನಿಸಿದ್ದಾರೆ.

ಇಂದು ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನ ಎಸ್ ಡಿ ಎಂ ಸಿ ಸದಸ್ಯರ ಸಭೆ ನಡೆದಿದ್ದು, ಈ ಸಭೆಯಲ್ಲಿ ಮಕ್ಕಳ ಪೋಷಕರು, ಶಾಲಾ ಮುಖ್ಯೋಪಾಧ್ಯಯರು, ಉಪನ್ಯಾಸಕರು ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.

ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಸ್ಥಿತಿ ಮತ್ತೆ ಗಂಭೀರ – Vishwanews24

ಈ ಸಭೆಯಲ್ಲಿ ತರಗತಿ ಹೊರತುಪಡಿಸಿ, ಶಾಲಾ ಆವರಣಕ್ಕೆ ಹಿಜಾಬ್, ಕೇಸರಿ ಶಾಲು ಧರಿಸಿ ಬರೋದಕ್ಕೆ ಅವಕಾಶ ನೀಡಲಾಗುವುದು ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದ್ದು,ಸೋಮವಾರದಿಂದ ಕಾಲೇಜಿನ ಒಳಗೆ ಹಿಜಾಬ್, ಕೇಸರಿ ಶಾಲು ಧರಿಸಿ ಬರೋದಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಇನ್ನು ಹಿಜಾಬ್, ಕೇಸರಿ ಶಾಲು ಧರಿಸಿದವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕೂಡ ಮಾಡಲಾಗಿದ್ದು, ತರಗತಿ ಒಳಗೆ ಮಾತ್ರ ಹಿಜಾಬ್, ಕೇಸರಿ ಶಾಲು ಧರಿಸೋದಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಸಭೆಯಲ್ಲಿ ತಿರ್ಮಾನಿಸಲಾಗಿದೆ.

ಮೂಡುಬಿದಿರೆ : ಕನ್ನಡದ ಬಾವುಟದೊಂದಿಗೆ ಮರಳಿನಲ್ಲಿ ಅರಳಿದ ಪುನೀತ್ ಭಾವಚಿತ್ರ – Vishwanews24

Leave a Reply