ಕುಂದಾಪುರ: ನಕ್ಸಲ್ ಲಕ್ಷ್ಮೀ ತೊಂಬಟ್ಟು ಶರಣಾಗತಿ : ಕುಟುಂಬದವರಲ್ಲಿ ಸಂತಸ – vishwanews24

Featured, ಉಡುಪಿ

ಕುಂದಾಪುರ : ಆಕೆ ಇನ್ನು ನಿಶ್ಚಿಂತೆಯಿಂದ ಮನೆಗೆ ಬರಬಹುದು, ಮನೆಯಲ್ಲಿ ಇರಬಹುದು: ಸಹೋದರ ವಿಠಲ ಪೂಜಾರಿ

ಕುಂದಾಪುರ: ಸುಮಾರು 2 ದಶಕಗಳ ಹಿಂದೆ ಮನೆ ತೊರೆದು, ನಕ್ಸಲ್‌ ಗುಂಪು ಸೇರಿಕೊಂಡಿದ್ದ ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆಯ ಲಕ್ಷ್ಮೀ ತೊಂಬಟ್ಟು ಶರಣಾಗಿರುವುದು ಕುಟುಂಬದವರಲ್ಲಿ ಸಂತಸ ಮೂಡಿಸಿದೆ.

7ನೇ ತರಗತಿಯವರೆಗೆ ಓದಿದ್ದ ಲಕ್ಷ್ಮೀ ಸಂಡೂರು ನೀರಾವರಿ ಪ್ರಾಜೆಕ್ಟ್ ಕೆಲಸಕ್ಕೆ ಹೋಗುತ್ತಿದ್ದರು. 2006ರಲ್ಲಿ ಒಂದು ದಿನ ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ಬಂದಿರಲಿಲ್ಲ. ನಾವು 3-4 ಹುಡುಕಾಟ ನಡೆಸಿದರೂ ಸಿಗಲಿಲ್ಲ. ಆ ಬಳಿಕ ಆಕೆ ನಕ್ಸಲ್‌ ಗುಂಪಿಗೆ ಸೇರಿದ್ದಾಳೆಂದು ತಿಳಿಯಿತು. ಆಮೇಲೆ ಶಂಕರನಾರಾಯಣ ಠಾಣೆಗೆ ತಿಳಿಸಿದೆವು ಎಂದು ಅಣ್ಣ ವಿಠಲ ಪೂಜಾರಿ ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು.

ಉಡುಪಿ : ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಂಚನೆ ಪ್ರಕರಣ – ಆರೋಪಿ ಬಂಧನ – vishwanews24

ಮನೆ ಬಿಟ್ಟು ಹೋಗುವಾಗ ಈಕೆಗೆ 17-18 ವರ್ಷ ಆಗಿರಬಹುದು. ಈ ಹಿಂದೆ ಈಕೆ ಊರಿಗೆ ಬಂದಿರುವುದಾಗಿ ಕೆಲವರು ಹೇಳುತ್ತಾರೆ. ಆದರೆ ನಾವು 2006ರ ಬಳಿಕ ಆಕೆಯನ್ನು ನೋಡುತ್ತಿರುವುದು ಇವತ್ತೇ. ಆಕೆಯನ್ನು ನೋಡಿ ನಮಗೆಲ್ಲ ತುಂಬಾ ಖುಷಿಯಾಯಿತು. ಈಕೆಯ ಕಾರಣಕ್ಕೆ ಆರಂಭದ ದಿನಗಳಲ್ಲಿ ನಾವು ತುಂಬಾ ತೊಂದರೆ ಅನುಭವಿಸಿದ್ದೆವು. ಇನ್ನು ಆಕೆ ನಿಶ್ಚಿಂತೆಯಿಂದ ಮನೆಗೆ ಬರಬಹುದು. ಮನೆಯಲ್ಲಿ ಇರಬಹುದು ಎನ್ನುತ್ತಾರೆ ವಿಠಲ ಪೂಜಾರಿ.

ಮನೆಯಲ್ಲಿದ್ದ ಬಡತನ ಆಕೆ ನಕ್ಸಲ್‌ ಸೇರಲು ಕಾರಣ ಇರಬಹುದು. ಆಕೆ ನಕ್ಸಲ್‌ ಸೇರಿದ ಬಳಿಕ ನಾವು ಅರಣ್ಯ ಇಲಾಖೆ ಹಾಗೂ ಪೊಲೀಸರಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದೆವು. ನಮ್ಮ ಮದುವೆ, ಹೆತ್ತವರ ಸಾವಿನ ಸಂದರ್ಭದಲ್ಲೂ ಆಕೆ ಬರಬಹುದು ಎಂದು ಪೊಲೀಸರು ಕಾದಿದ್ದರು ಎಂದು ಅವರು ಹೇಳಿದರು.

ಉಡುಪಿ: ಶರಣಾದ ನಕ್ಸಲ್​ ತೊಂಬಟ್ಟು ಲಕ್ಷ್ಮೀಗೆ ವೈದ್ಯಕೀಯ ಪರೀಕ್ಷೆ, ನ್ಯಾಯಾಂಗ ಬಂಧನ – vishwanews24

Leave a Reply