ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ – vishwanews24

Featured, ಉಡುಪಿ

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ

ಕುಂದಾಪುರ: ಮರವಂತೆ ಸಮುದ್ರ ಕಿನಾರೆಯ ಎದುರಿನ‌ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಮಧ್ಯಾಹ್ನ‌ ಸಂಭವಿಸಿದ ಬಸ್ಸು ಹಾಗೂ ಲಾರಿಗಳ ಢಿಕ್ಕಿಯಲ್ಲಿ ಬಸ್ಸಿನಲ್ಲಿ‌ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟು ಹಲವರು ಗಾಯಾಳುಗಳಾದ ಘಟನೆ ಸಂಭವಿಸಿದೆ.

ದುರಂತಕ್ಕೆ ಕಾರಣವಾದ ಬಸ್ಸಿನಲ್ಲಿ ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾನಿಲಯದ ಜಗದ್ಗುರು ರಂಭಾಪುರಿ ಕಲಾ & ವಾಣಿಜ್ಯ ಕಾಲೇಜಿನ‌ ವಿದ್ಯಾರ್ಥಿಗಳು ಹಾಗೂ‌ ಇತರರು‌ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – vishwanews24

ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್, ಡಿವೈಎಸ್ಪಿ ಎಚ್ ಡಿ‌ ಕುಲಕರ್ಣಿ, ಪಿಎಸ್ಐ ಪವನ್‌ ನಾಯ್ಕ್ ಭೇಟಿ‌ ನೀಡಿದ್ದಾರೆ.

Leave a Reply