ಕುಂದಾಪುರ: ಮಹಿಳೆ ನಾಪತ್ತೆ – vishwanews24
ಕುಂದಾಪುರ: ಮಹಿಳೆ ನಾಪತ್ತೆ
ಕುಂದಾಪುರ: ಇಲ್ಲಿನ ಹೊದ್ರೋಳಿಯ ದಿಣ ಸಂಜೀವ ಪೂಜಾರಿ ಅವರ ಪುತ್ರಿ ರೇಷ್ಮಾ (25) ಅವರು ಕೋಟೇಶ್ವರ ಕೊಡಿ ಹಬ್ಬಕ್ಕೆಂದು ಹೋದವರು ಕಾಣೆಯಾಗಿದ್ದಾರೆ.
ಅವರು ಪತಿ ಮನೆ ತರಿಕೆರೆ ತಾಲೂಕಿನ ಎರಂಗಾಪುರ ಗ್ರಾಮದಿಂದ ಪತಿಯ ಜತೆ ಆಗಮಿಸಿದ್ದರು. ಡಿ. 6ರಂದು ಜಾತ್ರೆಗೆ ಹೋದವರು ಕುಂದಾಪುರ ಶಾಸ್ತ್ರಿ ಸರ್ಕಲ್ ವರೆಗೆ ಬಂದಿದ್ದು ಬಳಿಕ ಕಾಣೆಯಾಗಿದ್ದಾರೆ.
5.4 ಅಡಿ ಎತ್ತರದ ಅವರು ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು ಕಾಣೆಯಾಗುವಾಗ ನೇರಳೆ ಬಣ್ಣದ ಸ್ಟೀವ್ಲೆಸ್ ಟಾಪ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕರಿಮಣಿ ಸರ ಹಾಗೂ 2 ಚಿನ್ನದ ಉಂಗುರ ಧರಿಸಿದ್ದರು. ಕನ್ನಡ ಭಾಷೆ ಅರಿತಿದ್ದಾರೆ. ಅವರ ಪತಿ ನೀಡಿದ ದೂರಿನಂತೆ ಇಲ್ಲಿ ಪ್ರಕರಣ ದಾಖಲಾಗಿದೆ.
