ಕುಂದಾಪುರ : ಯುವತಿ ಶಿಲ್ಪಾ ಆತ್ಮಹತ್ಯೆ ಹಿಂದೆ “ಲವ್ ಜಿಹಾದ್” ಷಡ್ಯಂತ್ರ : ವಿಹೆಚ್‌ ಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್‌ ಮೆಂಡನ್‌

Featured, ಉಡುಪಿ

ಲವ್ ಜಿಹಾದ್ ನ ವಿರುದ್ದ ಹೋರಾಟಕ್ಕೆ ಹಿಂದು ಸಮಾಜ ಒಟ್ಟಾಗಿ ಕೈ ಜೋಡಿಸಬೇಕು..

ಕುಂದಾಪುರ: ತಾಲೂಕಿನ ಉಪ್ಪಿನ ಕುದ್ರು ಯುವತಿ ಶಿಲ್ಪಾ ಆತ್ಮಹತ್ಯೆಯ ಹಿಂದೆ ಲವ್‌ ಜಿಹಾದ್‌ ಷಡ್ಯಂತ್ರ ಇದೆ ಎಂದು ವಿಶ್ವ ಹಿಂದೂ ಪರಿಷತ್‌ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್‌ ಮೆಂಡನ್‌ ಆರೋಪಿಸಿದ್ದಾರೆ.

ಉಪ್ಪಿನಕುದ್ರು ನಿವಾಸಿ ಶಿಲ್ಪ ಆತ್ಮಹತ್ಯೆ ಗೆ ಕಾರಣರಾದ ಕೊಟೇಶ್ವರದ ಅನ್ಯಕೋಮಿನ ಯುವಕ ಮತ್ತು ಆತನ ಪತ್ನಿಯ ಮೇಲೆ ಕಠಿಣ ಕ್ರಮವನ್ನು ಪೊಲೀಸ್ ಇಲಾಖೆ ಜರುಗಿಸಬೇಕು.. ಮತ್ತು ಇದರ ಹಿಂದೆ ಇರುವ ವ್ಯವಸ್ಥಿತ ಷಡ್ಯಂತ್ರವನ್ನು ಬಯಲುಗೊಳಿಸಬೇಕು. ಹಿಂದು ಸಮಾಜದ ಹುಡುಗಿಯರನ್ನು ಅನ್ಯಕೋಮಿನ ಯುವಕರು ಪ್ರೀತಿ ಪ್ರೇಮದ ನಾಟಕವಾಡಿ ಅಕ್ರಮ ಚಟುವಟಿಕೆಗೆ ಬಳಸಿಕೊಂಡು ಅವರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಜಿಹಾದಿ ಯುವಕರ ಬಗ್ಗೆ ಹಿಂದು ಸಮಾಜದ ಯುವತಿಯರು ಜಾಗ್ರತರಾಗಿರಬೇಕು. ಲವ್ ಜಿಹಾದ್ ನ ವಿರುದ್ದಹೋರಾಟಕ್ಕೆ ಹಿಂದು ಸಮಾಜ ಒಟ್ಟಾಗಿ ಕೈ ಜೋಡಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಕುಂದಾಪುರ :  ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು – Vishwanews24

Leave a Reply