ಕುಂದಾಪುರ:ವಿನಯ್ ಕುಮಾರ್ ಸೊರಕೆ ಜಾತಿ,ಧರ್ಮದ ಆಧಾರದ ಮೇಲೆ ರಾಜಕಾರಣಕ್ಕೆ ಬಂದವರಲ್ಲ : ಕೆ.ವಿಕಾಸ್ ಹೆಗ್ಡೆ -Vishwanews24
ಕುಂದಾಪುರ:ವಿನಯ್ ಕುಮಾರ್ ಸೊರಕೆ ಜಾತಿ,ಧರ್ಮದ ಆಧಾರದ ಮೇಲೆ ರಾಜಕಾರಣಕ್ಕೆ ಬಂದವರಲ್ಲ : ಕೆ.ವಿಕಾಸ್ ಹೆಗ್ಡೆ
ಜನಪರ ಹೋರಾಟಗಳ ಮೂಲಕ ರಾಜಕಾರಣಕ್ಕೆ ಬಂದವರು..
ಕುಂದಾಪುರ:ವಿನಯ್ ಕುಮಾರ್ ಸೊರಕೆಯವರದ್ದು ಜನ್ಮ ಭೂಮಿ ಪುತ್ತೂರು ಆದರೂ ಅವರ ಕರ್ಮ ಭೂಮಿ ಉಡುಪಿ ಜಿಲ್ಲೆ, ವಿನಯ್ ಕುಮಾರ್ ಸೊರಕೆ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಅವರ ಪಕ್ಷದ ನಾಯಕರುಗಳಂತೆ ಧರ್ಮ, ಜಾತಿಯ ಆದಾರದ ಮೇಲೆ ರಾಜಕಾರಣಕ್ಕೆ ಬಂದವರಲ್ಲಾ, ಸೊರಕೆಯವರು ಪುತ್ತೂರು ಶಾಸಕರಾಗುವ ಮೊದಲೇ ಜನಪರ ಹೋರಾಟಗಳ ಮೂಲಕ ಜನಸೇವೆಯ, ಜನಪರ ಹೋರಾಟಗಳ ಮೂಲಕ ರಾಜಕಾರಣಕ್ಕೆ ಬಂದವರು, ಉಡುಪಿ ಲೋಕಸಭಾ ಕ್ಷೇತ್ರ, ಕಾಪು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ದಿಸಿ ಜನರಿಂದ ಆಯ್ಕೆಯಾದವರು ಸೊರಕೆಯವರು, ಇವರನ್ನಾ ಪುನಃ ಪುತ್ತೂರಿಗೆ ಹೋಗಿ ಎಂದು ಹೇಳುವ ನೈತಿಕತೆ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಇಲ್ಲಾ ಆದರೆ ನಾವು ಅವರಂತೆ ಕೀಳು ಮನಸ್ಥಿತಿಯವರಲ್ಲಾ ನಾವು ಅವರ ಪಕ್ಷದ ಯಾವುದೇ ಜನಪ್ರತಿನಿಧಿಗಳಿಗೆ ಪುನಃ ಅವರ ಪ್ರದೇಶಕ್ಕೆ ಹೋಗಿ ಎನ್ನುವುದಿಲ್ಲಾ ಏಕೆಂದರೆ ನಾವು “ವಸುದೈವ ಕುಟುಂಬಿಕಮ್”ಎನ್ನುವ ಧ್ಯೇಯ ವಾಕ್ಯದಡಿ ನಂಬಿಕೆಯಿರುವವರು, ಸುರೇಶ್ ನಾಯಕರ ಮೇಲೆ ಯಡಮೊಗ್ಗೆಯ ಕೊಲೆ ಪ್ರಕರಣದ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪವಿರುವುದರಿಂದ ಅದರಿಂದ ತಪ್ಪಿಸಿಕೊಳ್ಳಲು ಸೊರಕೆಯಂತಹ ನಾಯಕರ ಬಗ್ಗೆ ಇಲ್ಲಸಲ್ಲದ ಹೇಳಿಕೆ ಕೊಡುವುದು ಸರಿಯಲ್ಲಾ ಹಾಗೂ ಇದು ಅವರ ರಾಜಕೀಯ ದಿವಾಳಿತನದ ಹೇಳಿಕೆಯಾಗಿದೆಯೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
