ಕುಂಭಮೇಳಕ್ಕಾಗಿ ರಸ್ತೆ ಅಗಲೀಕರಣ… ಸ್ವಯಂಪ್ರೇರಿತವಾಗಿ ಮಸೀದಿ ಒಡೆದ ಮುಸ್ಲಿಂ ಮುಖಂಡರು!
ಅಲಹಬಾದ್ : ಉತ್ತರ ಪ್ರದೇಶದಲ್ಲಿ ನಡೆಯಲಿರುವ ಕುಂಭಮೇಳಕ್ಕಾಗಿ ರಸ್ತೆ ಅಗಲೀಕರಣಕ್ಕೆ ಸರ್ಕಾರ ಮುಂದಾಗಿದ್ದು, ಮುಸ್ಲಿಂ ಸಮುದಾಯದವರು ಸ್ವಯಂ ಪ್ರೇರಿತರಾಗಿ ಮಸೀದಿಯ ಮುಂಭಾಗವನ್ನು ತೆರವುಗೊಳಿಸಿದ್ದಾರೆ.
2019 ರ ಜನವರಿ 15 ರಂದು ನಡೆಯಲಿರುವ ಕುಂಭಮೇಳಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಭರ್ಜರಿ ಸಿದ್ದತೆಯಲ್ಲಿ ತೊಡಗಿದೆ. ಇದಕ್ಕಾಗಿ ರಸ್ತೆ ಅಗಲೀಕರಣ ನಡೆಯುತ್ತಿದೆ. ಇದನ್ನು ಬೆಂಬಲಿಸಿರುವ ಅಲಹಾಬಾದ್ ಹಳ ನಗರದ ಮುಸ್ಲಿಮರು ರಸ್ತೆ ಬದಿಯಲ್ಲಿರುವ ಹಾಗೂ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಮಸೀದಿಯನ್ನು ತೆರವುಗೊಳಿಸಿದ್ದಾರೆ.
ಕುಂಭ ಮೇಳಕ್ಕೆ ಅಂತಾರಾಷ್ಟ್ರೀಯ ಮಾನತ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವ ವಹಿಸಿ ಕುಂಭ ಮೇಳಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಸರ್ಕಾರ ರಸ್ತೆ ಅಗಲೀಕರಣಕ್ಕೆ ಮುಂದಾಗುವ ಮೊದಲೇ ಸ್ವಯಂ ಪ್ರೇರಿತವಾಗಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸಿಎಂ ಯೋಗಿ ಅವರ ಕಾರ್ಯವನ್ನು ಬೆಂಬಲಿಸಿ ಮಸೀದಿಯನ್ನು ತೆರವುಗೊಳಿಸುತ್ತಿರುವುದಾಗಿ ಇಲ್ಲಿನ ಮುಸ್ಲಿಂ ಸಮುದಾಯದ ಹಿರಿಯ ವ್ಯಕ್ತಿ ತಿಳಿಸಿದ್ದಾರೆ.
ಕುಂಭ ಮೇಳಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿಸುಕೊಡುವಲ್ಲಿ ಹಿಂದಿನ ಸರ್ಕಾರಗಳು ವಿಫಲವಾಗಿದ್ದಾವೆ ಎಂದು ಸಿಎಂ ಯೋಗಿ ದೂರಿದ್ದರು. ಈ ಹಿನ್ನೆಲೆಯಲ್ಲಿ ವೈಯಕ್ತಿವಾಗಿ ಅವರೇ ನೇತೃತ್ವ ವಹಿಸಿ ಕುಂಭಮೇಳಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇದ ಭಾಗವಾಗಿರುವ ರಸ್ತೆ ಅಗಲೀಕರಣಕ್ಕೆ ಮುಸ್ಲಿಮರಿಂದಲೇ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
