ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ ಕೊಲೆಯಂಥ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ:ಯೋಗಿ ಆದಿತ್ಯನಾಥ್ – vishwanews24
ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ ಕೊಲೆ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ:ಯೋಗಿ ಆದಿತ್ಯನಾಥ್
ಲಕ್ನೋ,: ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ ಅಥವಾ ಕೊಲೆಯ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಅರವತ್ತಾರು ಕೋಟಿ ಜನರು ಆಗಮಿಸಿ ಭಾಗವಹಿಸಿದರು. ಕುಂಭಮೇಳದಲ್ಲಿ ಪಾಲ್ಗೊಂಡು ಸಂತೋಷದಿಂದ ಹೋಗಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಅಂಗೀಕರಿಸಲಾದ 2025-26ನೇ ಸಾಲಿನ ರಾಜ್ಯ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿಪಕ್ಷಗಳಿಗೆ ಸಿಎಂ ಯೋಗಿ ತಿರುಗೇಟು ನೀಡಿದ್ದಾರೆ.
ಬಂಟ್ವಾಳ : ಬಸ್- ಕಾರು ಡಿಕ್ಕಿ; ಕಾರು ಚಾಲಕ ಗಂಭೀರ ಗಾಯ – vishwanews24
ಪ್ರಯಾಗ್‌ರಾಜ್‌ನ ದೋಣಿ ಚಾಲಕರನ್ನು ಶೋಷಿಸಲಾಗಿದೆ ಎಂಬ ಸಮಾಜವಾದಿ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದಯೋಗಿ, ನಾನು ದೋಣಿ ಚಾಲಕನ ಕುಟುಂಬದ ಯಶಸ್ಸಿನ ಕಥೆಯನ್ನು ಹೇಳುತ್ತಿದ್ದೇನೆ. ಅವರ ಬಳಿ 130 ದೋಣಿಗಳಿವೆ. 45 ದಿನಗಳಲ್ಲಿ (ಮಹಾ ಕುಂಭ) ಅವರು 30 ಕೋಟಿ ರೂ. ಲಾಭ ಗಳಿಸಿದ್ದಾರೆ. ಇದರರ್ಥ ಪ್ರತಿ ದೋಣಿಯಿಂದ 23 ಲಕ್ಷ ರೂ. ಗಳಿಸಿದ್ದಾರೆ. ಪ್ರತಿದಿನ ಅವರು ಒಂದು ದೋಣಿಯಿಂದ 50,000-52,000 ರೂ. ಗಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಹಾ ಕುಂಭಮೇಳಕ್ಕೆ 7,500 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿತ್ತು. ಇದರಿಂದ ದಾಖಲೆಯ 3 ಲಕ್ಷ ಕೋಟಿ ರೂಪಾಯಿ ವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಸಮರ್ಥಿಸಿಕೊಂಡಿದ್ದಾರೆ.
ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಪ್ರಿಯಕರ – vishwanews24
