ಕುಕ್ಕೆ ತಲುಪಿದ ಬ್ರಹ್ಮರಥ : ಮುಸ್ಲಿಂ ಬಾಂಧವರಿಂದ ಸಿಹಿ ತಿನಿಸು ವಿತರಿಸುವ ಮೂಲಕ ಅದ್ಧೂರಿ ಸ್ವಾಗತ -Vishwanews24
ಸುಬ್ರಹ್ಮಣ್ಯ: ಉಡುಪಿಯ ಕೋಟೇಶ್ವರದಲ್ಲಿ ನಿರ್ಮಾಣಗೊಂಡ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ನೂತನ ಬ್ರಹ್ಮ ರಥವನ್ನು ರಸ್ತೆ ಮಾರ್ಗ ಮೂಲಕ ಕ್ಷೇತ್ರಕ್ಕೆ ತರಲಾಗಿದ್ದು , ರಥ ಬರುವ ಹಲವು ಕಡೆಗಳಲ್ಲಿ ಬ್ರಹ್ಮರಥಕ್ಕೆ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸಿದ್ದರು.
ಕುಕ್ಕೆ ಸುಬ್ರಹ್ಮಣ್ಯ ತಲುಪಲಿದ ಬ್ರಹ್ಮರಥಕ್ಕೆ ಕ್ಷೇತ್ರದ ವತಿಯಿಂದ ಪೂಜೆ ನೆರವೇರಿಸಲಾಯಿತು. ಧಾರ್ಮಿಕ ವಿಧಿ-ವಿಧಾನಗಳ ಮೂಲಕ ರಥವನ್ನು ದೇವರಿಗೆ ಸಮರ್ಪಿಸಲಾಯಿತು. ಬ್ರಹ್ಮ ರಥ ಸಂಚರಿಸುವ ದಾರಿಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬ್ರಹ್ಮರಥವನ್ನು ಸ್ವಾಗತ ಮಾಡಿದ್ದರು.
ಜಾತಿ-ಧರ್ಮದ ಕಟ್ಟುಪಾಡುಗಳನ್ನು ಬಿಟ್ಟು ಎಲ್ಲಾ ಸಮಾಜ ರಥವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಸ್ವಾಗತಿಸಿದ್ದು ವಿಶೇಷವಾಗಿತ್ತು. ರಥದಲ್ಲಿ ಸಾಗಿ ಬಂದ ನೂರಾರು ಭಕ್ತರಿಗೆ ಮರ್ದಾಳದ ಮುಸ್ಲಿಂ ಬಾಂಧವರು ಸಿಹಿ ತಿನಿಸುಗಳನ್ನು ವಿತರಿಸುವ ಮೂಲಕ ಬ್ರಹ್ಮರಥವನ್ನು ಸ್ವಾಗತಿಸಿದರು. ಮರ್ಧಾಳದ ಮಸೀದಿ ವತಿಯಿಂದ ಬ್ರಹ್ಮರಥದ ಜೊತೆಗೆ ಬಂದ ಭಕ್ತಾಧಿಗಳಿಗೆ ಲಡ್ಡು ಹಾಗೂ ತಂಪುಪಾನೀಯದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಕೋಟೇಶ್ವರದಲ್ಲಿ ಸಿದ್ಧಗೊಂಡ ಬ್ರಹ್ಮರಥ ಬುಧವಾರವು ಅದ್ದೂರಿ ಮೆರವಣಿಗೆಯ ಮೂಲಕ ಕುಕ್ಕೆ ಪುರ ಪ್ರವೇಶಿಸಿದ್ದು ಬ್ರಹ್ಮ ರಥ ಸುಬ್ರಹ್ಮಣ್ಯ ವನ್ನು ತಲುಪಲಿರುವ ಹಿನ್ನಲೆಯಲ್ಲಿ ,ಭವ್ಯ ಮೆರವಣಿಗೆ ಮೂಲಕ ರಥವನ್ನು ಸ್ವಾಗತಿಸಲಾಯಿತು.
