ಕುಟುಂಬ ಸಮ್ಮುಖದಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ – vishwanews24
ನಿಶ್ಚಿತಾರ್ಥ ಮಾಡಿಕೊಂಡ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ
ಹೈದರಾಬಾದ್: ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ನಲ್ಲಿರುವ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಗುರುವಾರ (ಆ.8ರಂದು) ಹೈದರಾಬಾದ್ನಲ್ಲಿರುವ ನಾಗಚೈತನ್ಯ ಅವರ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಎಂಗೇಜ್ ಮೆಂಟ್ ಬಳಿಕ ನಾಗಾರ್ಜುನ್ ಫೋಟೋಗಳನ್ನು ಹಂಚಿಕೊಂಡು ಶುಭಕೋರಿದ್ದಾರೆ.
“ನಮ್ಮ ಮಗ ನಾಗ ಚೈತನ್ಯ ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಇಂದು ಬೆಳಿಗ್ಗೆ 9:42ಕ್ಕೆ ನೆರವೇರಿದೆ. ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಘೋಷಿಸಲು ತುಂಬಾ ಸಂತೋಷವಾಗುತ್ತಿದೆ. ಅವಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ. ದಂಪತಿಗಳಿಗೆ ಅಭಿನಂದನೆಗಳು! ಅವರಿಗೆ ಜೀವನಪೂರ್ತಿ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ!” ಎಂದು ‘ಎಕ್ಸ್ʼನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಶೋಭಿತಾ ರೇಷ್ಮೆ ಸೀರೆ ಮತ್ತು ಸಾಂಪ್ರದಾಯಿಕ ಚಿನ್ನದ ಆಭರಣಗಳನ್ನಯ ತೊಟ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಬಿಳಿ ಡ್ರೆಸ್ ನಲ್ಲಿ ರಾಯಲ್ ಆಗಿ ಕಾಣಿಸಿಕೊಂಡಿದ್ದಾರೆ.
ಅಭಿಮಾನಿಗಳು ಹಾಗೂ ಗೆಳೆಯರು ಇಬ್ಬರಿಗೆ ಶುಭ ಹಾರೈಸಿದ್ದಾರೆ.ನಾಗಾರ್ಜುನ ಅವರ ಪತ್ನಿ ಅಮಲಾ ಅಕ್ಕಿನೇನಿ ಮತ್ತು ಚೈತನ್ಯ ಅವರ ಸಹೋದರ ಅಖಿಲ್ ಅವರು ಧೂಳಿಪಾಲ ಅವರ ಪೋಷಕರ ಸಮ್ಮುಖದಲ್ಲಿ ನಿಶ್ಚಿತಾರ್ಥ ಸಮಾರಂಭದಲ್ಲಿ ನೆರವೇರಿದೆ
