ಕುಮಾರಸ್ವಾಮಿ ಬಜೆಟ್​ ಮಂಡನೆ ; ಬಜೆಟ್ ವಿರೋಧಿಸಿ ಬಿಜೆಪಿ ಶಾಸಕರ ಸಭಾತ್ಯಾಗ – Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಬಜೆಟ್​ ಅಧಿವೇಶನದ ಶುಕ್ರವಾರದ ಕಲಾಪ ಆರಂಭವಾಗುತ್ತಲೇ ಬಿಜೆಪಿ ಶಾಸಕರು ಸದನದಲ್ಲಿ ಗದ್ದಲ ಎಬ್ಬಿಸಿ, ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರಿಂದ ಬಜೆಟ್​ ಮಂಡನೆಗೆ ಅಡ್ಡಿಪಡಿಸಲು ಯತ್ನಿಸಿದರು. ಆದರೂ ಇದಕ್ಕೆ ಜಗ್ಗದ ಕುಮಾರಸ್ವಾಮಿ ಬಜೆಟ್​ ಓದಲು ಆರಂಭಿಸಿದರು.

ತಮ್ಮ ವಿರೋಧದ ಬಗ್ಗೆ ಒಂದಿಷ್ಟೂ ಬೆಲೆ ಕೊಡದೆ ಸಿಎಂ ಬಜೆಟ್​ ಮಂಡಿಸುವ ಪ್ರಕ್ರಿಯೆ ಮುಂದುವರಿಸಿದ್ದರಿಂದ, ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.

2ನೇ ಬಜೆಟ್​: ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಸಿಎಂ ಕುಮಾರಸ್ವಾಮಿ ಮಂಡಿಸುತ್ತಿರುವ 2ನೇ ಬಜೆಟ್ ಇದಾಗಿದೆ. ನೇಗಿಲ ಯೋಗಿಗೆ ನೆರವು, ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ಒತ್ತು. ನಮ್ಮಲ್ಲಿ ಉತ್ತರ, ದಕ್ಷಿಣ, ಕರಾವಳಿ ಎಂಬ ಬೇಧ-ಭಾವ ಇಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವುದಾಗಿ ಹೇಳಿದರು. ಕೊಡಗಿನಲ್ಲಿ ನಿರಾಶ್ರಿತರಿಗೆ 800ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.